103
ಮೂಡ್ಲಕಟ್ಟೆ : ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ದಿನಾಂಕ 20 ಜೂನ್ 2025 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ಲಕಟ್ಟೆ ಇವರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಯೋಗ ಹಾಗೂ ಆಧ್ಯಾತ್ಮಿಕ ಸಂಘದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಯುತ ಬಿ ಅಣ್ಣಪ್ಪ ಶೆಟ್ಟಿಗಾರ್, ವ್ಯವಸ್ಥಾಪಕರು ಓಂ ಯೋಗ ಮಂದಿರ ಕೋಟೇಶ್ವರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಪರಿಚಯಿಸಿ ಕೊಡುವುದರ ಮೂಲಕ ಯೋಗವು ಮನಸ್ಸು ಆತ್ಮ ಹಾಗೂ ಶರೀರವನ್ನು ಒಂದುಗೂಡಿಸುತ್ತದೆ ಎಂಬುದಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರು ಡಾ. ಪ್ರತಿಭಾ ಎಂ ಪಾಟೀಲ್ ವಹಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀಮತಿ ನಾಗವೇಣಿ, ಆಶಾ ಎಂ ಕೆ ಹಾಗೂ ಯೋಗ ಮತ್ತು ಆಧ್ಯಾತ್ಮಿಕ ಸಂಘದ ಸಂಯೋಜಕರಾದ ಶ್ರೀಮತಿ ರಕ್ಷಾ ಮತ್ತು ಕುಮಾರಿ ಅಂಕಿತ ಉಪಸ್ಥಿತರಿದ್ದರು

