ಕೋಟ : ಮೂಡುಗಿಳಿಯಾರು ಸ.ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ., ಯೂ.ಕೆ.ಜಿ. ಉದ್ಘಾಟನೆ ಕಾರ್ಯಕ್ರಮ ಜೂ. ೨೧ರಂದು ಶಾಲೆ ವಠಾರದಲ್ಲಿ ಜರಗಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೂತನ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ‍್ಯ ಎನ್ನುವ ಮನಃಸ್ಥಿತಿ ಹೆತ್ತವರಲ್ಲಿದೆ. ಹೀಗಾಗಿ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಕನ್ನಡದ ಜತೆ-ಜತೆಗೆ ಇಂಗ್ಲೀಷ್ ಬೋಧನೆ ಅನಿವರ‍್ಯವಾಗಿ ಬೇಕಿದೆ ಎಂದರು. ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಯೋಗೀಂದ್ರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಸತೀಶ್ ದೇವಾಡಿಗ ಹೋಳಿಗೆಮನೆ, ಗೋಪಾಲ ಜಿ., ಅಶೋಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವರಾಮ್ ಭಟ್, ನಿವೃತ್ತ ಮುಖ್ಯ ಶಿಕ್ಷಕರಾದ ಭೋಜ ಶೆಟ್ಟಿ ಅಚ್ಲಾಡಿ, ಕೃಷ್ಣ ಆಚಾರ್ಯ, ಬಸವ ಕುಲಾಲ್, ಶೇಷು, ಗ್ರಾ.ಪಂ. ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಶೋಭಾ, ಸುಚಿತ್ರಾ ಶೇಖರ್ ಜಿ., ಮಾಜಿ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಸಿ.ಆರ್.ಪಿ. ಸವಿತಾ, ತಾ.ಪಂ. ಮಾಜಿ ಸದಸ್ಯ ಭರತ್ ಕುಮಾರ್ ಶೆಟ್ಟಿ, ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟೇಶ್ ಅಡಿಗ, ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಗಿಳಿಯಾರು, ಪ್ರಾಥಮಿಕ ಶಾಲೆಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಇದ್ದರು. ಮುಖ್ಯ ಶಿಕ್ಷಕ ರಮೇಶ್ ಸ್ವಾಗತಿಸಿ, ಶಿಕ್ಷಕ ವಿಜಯ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಸಂತಿ ವಂದಿಸಿದರು.