ಉಡುಪಿ : ಕಾಶ್ಮೀರದಲ್ಲಿ ಮುಸ್ಲಿಂ ಜಿಹಾದಿಗಳು ಧರ್ಮ ಕೇಳಿ ಗುಂಡು ಹೊಡೆದಿದ್ದಾರೆ. ಭಯೋತ್ಪಾದನೆ ಬಗ್ಗೆ ಗೊತ್ತಿದ್ದೂ ಸಿಎಂ ಯುದ್ಧ ಬೇಡ ಅಂದಿರುವುದು ದುರದೃಷ್ಟಕರ ದೇಶಕ್ಕೆ ಗಂಡಾಂತರ ಬಂದಾಗ ಹೀಗೆಲ್ಲ ಮಾತನಾಡಬೇಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನಡೆದ ಯುದ್ಧಕ್ಕೆ ಆರ್‌ಎಸ್‌ಎಸ್, ವಾಜಪೇಯಿ, ಜನಸಂಘ ಎಲ್ಲರೂ ಬೆಂಬಲಿಸಿದ್ದರು. ರಾಜಕೀಯ ಬೇರೆ, ದೇಶ ಬೇರೆ ಇದನ್ನು ಮೊದಲು ಅರಿತುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.
ಮತ, ಧರ್ಮದ ಕಾರಣಕ್ಕೆ ಭಾರತೀಯ ಹಿಂದೂಗಳನ್ನು ಹತ್ಯೆ ಮಾಡಿದ್ದನ್ನು ಸಮರ್ಥಿಸುವುದು ನಿಮ್ಮ ಹುದ್ದೆಗೆ ಗೌರವ ಅಲ್ಲ. ತಮ್ಮ ಹೇಳಿಕೆಯಿಂದ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಬಹಳ ದೊಡ್ಡ ಮುಖಂಡರಾಗಿದ್ದಾರೆ ಮುಖ್ಯಮಂತ್ರಿಗಳು ದೇಶಕ್ಕೆ ಶಕ್ತಿ ಕೊಡುವ ಕೆಲಸ ಮಾಡಲಿ, ಯುದ್ಧ ಬೇಡ ಅಂತೀರಿ, ಹೋದವರ ಜೀವ ಮತ್ತೆ ಬರುತ್ತಾ.? ಎಂದು ಪ್ರಶ್ನಿಸಿದರು.
ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ, ಶಾಸಕರ ಮನೆಗೆ ಬೆಂಕಿ ಇಟ್ಟಾಗ ಭದ್ರತಾ ವೈಫಲ್ಯ ಆಗಿರಲಿಲ್ಲವೇ ? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಸಹಾನುಭೂತಿ ತೋರಿಸುತ್ತಿರಿ..? ಅನಿವಾರ್ಯಾದರೆ ಯುದ್ಧ ಮಾಡಬೇಕು, ನೀವು ಬೆಂಬಲಿಸಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗಿ ನಿಮ್ಮ ಈ ಮಾತು ಶೋಭೆ ತರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

