ಕುಂದಾಪುರ : ಮಳೆಗಾಲ ಆರಂಭಕ್ಕೂ ಮುನ್ನ ಕುಂದಾಪುರದ ರಸ್ತೆ ಹಾಗೂ ಚರಂಡಿಗಳನ್ನು ಸುಸ್ಥಿತಿಯಲ್ಲಿ ಇರಿಸಬೇಕಾಗಿರುವುದು ಕುಂದಾಪುರ ಪುರಸಭೆಯ ಆದ್ಯ ಕರ್ತವ್ಯ
ಕುಂದಾಪುರ ನಗರದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಸ್ಥಳೀಯ ಚರಂಡಿಗಳಲ್ಲದೆ ಹೆದ್ದಾರಿಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕಾಗಿದ್ದು ಈ ನಿಟ್ಟಿನಲ್ಲಿ ಕುಂದಾಪುರ ಪುರಸಭೆಯ ಆಡಳಿತವು ಕಾರ್ಯ ತತ್ಪರರಾಗಬೇಕಾಗಿದೆ
ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರುಗಡೆ ಹಳೆ ಆದರ್ಶ ಆಸ್ಪತ್ರೆಯ ಪಕ್ಕ ಸಂತೆ ಮಾರ್ಕೆಟ್ (ಎಪಿಎಂಸಿ) ಹಾಗೂ ಸಂಗಮ್ ಜಂಕ್ಷನ್ ಗಳಲ್ಲಿ ಚರಂಡಿ ವ್ಯವಸ್ಥೆಗಳು ಅಸಮರ್ಪಕವಾಗಿದ್ದು ಎಲ್ಲಾ ಕಡೆ ನೀರು ನಿಂತು ಸುಗಮ ಸಂಚಾರಕ್ಕೆ ಧಕ್ಕೆ ಆಗುತ್ತಿದ್ದು ಅಪಘಾತ ವಲಯವಾಗಿ ಪರಿಣಮಿಸಿದೆ
ಈ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ ನಗರ ಭಾಗದ ರಸ್ತೆ ಬದಿ ಇನ್ನೂ ಚರಂಡಿಗಳ ದುರಸ್ತಿ ನಡೆದಿಲ್ಲ ಕೆಲವು ಕಡೆ ಚರಂಡಿ ಕಾಮಗಾರಿ ಅಪೂರ್ಣವಾಗಿದೆ ರಸ್ತೆ ಬದಿಯ ಚರಂಡಿಗಳಲ್ಲಿ ಮಣ್ಣು ಹೂಳು ಕಸ ಕಡ್ಡಿ ತುಂಬಿದೆ ಕೆಲವು ಕಡೆ ಕಳೆ ಗಿಡಗಳು ಒಣಗಿ ಚರಂಡಿ ಕಾಣದಾಗಿದೆ ಮಳೆ ಆರಂಭವಾದರೆ ನೀರು ಹರಿಯಲು ಜಾಗವಿಲ್ಲದೆ ರಸ್ತೆಗಳು ಹೊಂಡದಂತಾಗುತ್ತದೆ ಇದರೊಂದಿಗೆ ಅಪಾಯಕಾರಿ ಮರ ಮುಟ್ಟುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ಅಧಿಕಾರಿಗಳು ತುರ್ತು ಗಮನ ಹರಿಸಬೇಕಾಗಿದೆ
ಕೆ.ಗಣೇಶ್ ಹೆಗ್ಡೆ ಕುಂದಾಪುರ