ಉಡುಪಿ :ಮಲ್ಪೆಯ ನೇಜಾರಿನ ತೃಪ್ತಿ ನಗರದ ಮನೆಯಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಗುರುವಾರ ಸಂಜೆ ಸ್ಥಳ ಮಹಜರಿಗಾಗಿ ಕೃತ್ಯ ನಡೆದ ಮನೆಗೆ ಕರೆ ತಂದಿದ್ದು ಈ ಸಂಬಂಧ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ
ಗುರುವಾರ ಬೆಳಿಗ್ಗೆಯೇ ಮಹಾಜರಿಗಾಗಿ ಆರೋಪಿಯನ್ನು ಕರೆ ತರುತ್ತಾರೆ ಎಂಬ ಮಾಹಿತಿಯ ಮೇರೆಗೆ ಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು ಆರೋಪಿಯನ್ನು ಕರೆತರುತ್ತಿದ್ದಂತೆ ಸಾರ್ವಜನಿಕರು ಆರೋಪಿಯಿದ್ದ ಪೊಲೀಸ್ ವಾಹನಕ್ಕೆ ನುಗ್ಗಲು ಯತ್ನಿಸಿದ್ದಾರೆ ಜನಾಕ್ರೋಶದ ನಡುವೆ ಮಹಜರು ಪ್ರಕ್ರಿಯೆಯನ್ನು ಮುಗಿಸಿದ ಪೊಲೀಸರು ಸುರಕ್ಷಿತವಾಗಿ ಆರೋಪಿಯನ್ನು ವಾಪಾಸು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ

ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಆತ 15 ನಿಮಿಷ ತೆಗೆದುಕೊಂಡಿದ್ದಾನೆ ನಮಗೆ 30 ಸೆಕೆಂಡು ಅವನನ್ನು ನಮಗೆ ಕೊಡಿ ಎಂದು ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇದರಿಂದ ಸ್ಥಳದಲ್ಲಿ ಕೆಲವು ಕಾಲ ಬಿಗುವಿನ ವಾತಾವರಣ ಉಂಟಾಗಿದ್ದು ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ

