Home » ಕುಂದಾಪುರ ನಾಗಮಂಡಲ : ಪೂರ್ವಭಾವಿ ಸಭೆ
 

ಕುಂದಾಪುರ ನಾಗಮಂಡಲ : ಪೂರ್ವಭಾವಿ ಸಭೆ

by Kundapur Xpress
Spread the love

ಕುಂದಾಪುರ : ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನದಲ್ಲಿ  ನಾಗಮಂಡಲೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಕೃಷ್ಣಯ್ಯ ಶೇರಿಗಾರ್‌ ರವರ ಮನೆಯಲ್ಲಿ ಜರುಗಿತು ಕುಂದಾಪುರ ನಗರದ ಮೀನು ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ದಿ. ಸುಬ್ಬಣ್ಣ ಶೇರಿಗಾರ್‌ ಹಾಗೂ ದಿ.ಕಮಲ ಸುಬ್ಬಣ್ಣ ಶೇರಿಗಾರ್‌ ಇವರ ಮಕ್ಕಳಾದ ಕೃಷ್ಣಯ್ಯ ಶೇರಿಗಾರ್‌ ಮತ್ತು ಸದಾಶಿವ ಶೇರಿಗಾರ್‌ ರವರು ನಾಗಮಂಡಲದ ಸೇವಾಕರ್ತರಾಗಿದ್ದಾರೆ

2025ನೇ ಇಸವಿ ಫೆಬ್ರವರಿ.02ರಂದು ನಾಗಮಂಡಲವನ್ನು ಹಮ್ಮಿಕೊಳ್ಳಲು ನಿಶ್ಚಯಿಸಲಾಗಿದ್ದು ಆ ಪ್ರಯುಕ್ತ ಜನವರಿ 31ರಂದು ಶ್ರೀ ದೇವರಿಗೆ ಹೊರೆ ಕಾಣಿಕೆಯ ಪುರಮೆರವಣಿಗೆಯು ಕುಂದೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಹೊಸ ಬಸ್ ಸ್ಟ್ಯಾಂಡ್ ಮೂಲಕ ತಿರುಗಿ ಕುಂದಾಪುರ ನಗರದ ಫಿಶ್ ಮಾರ್ಕೆಟ್ ರಸ್ತೆಯಲ್ಲಿ ಜರುಗಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನದಲ್ಲಿ ಸಂಪನ್ನಗೊಳ್ಳುವುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು

ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಶ್ರೀ ನಾಗಬೊಬ್ಬರ್ಯ ದೇವಸ್ಥಾನದ ಪ್ರಮುಖ ಅರ್ಚಕರಾದ ನಾರಾಯಣ ಹೊಳ್ಳ ಸೇವಕರ್ತರಾದ ಕೃಷ್ಣಯ್ಯ ಶೇರಿಗಾರ್‌ ಸದಾಶಿವ ಶೇರಿಗಾರ್‌ ಹಾಗೂ ನಗರದ ಪ್ರಮುಖರಾದ ಡಿ.ಕೆ ಅಣ್ಣಪ್ಪಯ್ಯ ಮಾಸ್ಟರ್ ಸೂರ್ಯಕಾಂತ್ ದಫೇದಾರ್ ಅಶೋಕ್ ಬೆಟ್ಟಿನ್ ಪ್ರಕಾಶ್ ಬೆಟ್ಟಿನ್ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಶ್ರೀಧರ್‌ ಶೇರಿಗಾರ್ ಯೋಗೀಶ್‌ ಕಿಣಿ  ಶೀನ ಖಾರ್ವಿ ಗೋವರ್ಧನ ಗಾಣಿಗ  ವಿಶ್ವ ರಾಮಕ್ಷತ್ರಿಯ ಸಂಘದ ಖಜಾಂಚಿಗಳಾದ ಶ್ರೀಮತಿ ರಶ್ಮೀರಾಜ್‌  ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು ಮತ್ತು ವಿವಿಧ ಸ್ವ-ಸಹಾಯ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು

   

Related Articles

error: Content is protected !!