Home » ನಂದಿನಿ ಶ್ರೇಷ್ಠತೆಯ ಸಂಕೇತ : ಕೆ.ಪಿ. ಸುಚರಿತ ಶೆಟ್ಟಿ
 

ನಂದಿನಿ ಶ್ರೇಷ್ಠತೆಯ ಸಂಕೇತ : ಕೆ.ಪಿ. ಸುಚರಿತ ಶೆಟ್ಟಿ

by Kundapur Xpress
Spread the love

ಕಾರ್ಕಳ : ಗೋವಿನಿಂದ ಗ್ರಾಹಕನವರೆಗೆ ಶ್ರೇಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ನಂದಿನಿ ಲಕ್ಷಾಂತರ ಗ್ರಾಹಕರ ಮನೆ ಮನಗಳನ್ನು ಮುಟ್ಟಿದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲು ಒಕ್ಕೂಟವು ದಿನಂಪ್ರತಿ 4.5ಲಕ್ಷ ಲೀಟರ್ ಗಿಂತಲೂ ಹೆಚ್ಚಿನ ಹಾಲನ್ನು ಸಂಗ್ರಹಿಸುತ್ತಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದು ದ .ಕ .ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪಿ ಸುಚರಿತ ಶೆಟ್ಟಿ ಅವರು ಕಾರ್ಕಳ ನಗರದ ಅನಂತಶಯನ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ನಂದಿನಿ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ  ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ನನ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಕ್ಲೆಮಂಟ್ ಮಸ್ಕರೇನಸ್ ರವರು ಸಾಂಪ್ರದಾಯಿಕ ಪ್ರಾರ್ಥನೆಯ ಬಳಿಕ, ನೂತನ ನಂದಿನಿ ಮಳಿಗೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯ ಮೂಲಕ ಮನೆ ಮಾತಾಗಲಿ ಎಂದು ಹಾರೈಸಿದರು

ಉದ್ಘಾಟನಾ ಸಮಾರಂಭದಲ್ಲಿ ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಡಾ. ರವಿರಾಜ ಉಡುಪರವರು ಉಪಸ್ಥಿತರಿದ್ದರು ದ.ಕ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶ್ರೀ ಬೋಳ ಸದಾಶಿವ ಶೆಟ್ಟಿ, ಶ್ರೀ ಸಾಣೂರು ನರಸಿಂಹ ಕಾಮತ್ ಮತ್ತು ಶ್ರೀ ಮುಡಾರು ಸುಧಾಕರ ಶೆಟ್ಟಿಯವರು ಶುಭ ಹಾರೈಸಿದರು.

ಕಾರ್ಕಳ ಪುರಸಭಾ ಸದಸ್ಯರುಗಳಾದ ಶ್ರೀ ಶುಭದ ರಾವ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ರೆಹ್ಮತ್, ಉದ್ಯಮಿಗಳಾದ ಶ್ರೀ ಸಂದೇಶ್ ವರ್ಮ, ಶ್ರೀ ರಾಜೇಂದ್ರ, ಶ್ರೀ ನೇ ವಿಲ್ ಡಿಸೋಜ, ನಂದಿನಿ ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಶ್ರೀ ಸಂದೀಪ್ ನಾಯಕ್ ಮತ್ತು ರಕ್ಷಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ನಂದಿನಿ ಮಾರುಕಟ್ಟೆ ವಿಭಾಗದ ಉಪ_ವ್ಯವಸ್ಥಾಪಕರಾದ ಶ್ರೀ ಸುಧಾಕರ್ ಪವಾರ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ನಂದಿನಿ ಮಳಿಗೆಯ ಮಾಲಕರಾದ ಶ್ರೀ ಜೀವನ್ ರವರು ಸ್ವಾಗತಿಸಿದರು

   

Related Articles

error: Content is protected !!