ಬೈಂದೂರು : ಬೈಂದೂರು ತಾಲೋಕಿನ ಉಪ್ಪುಂದದಲ್ಲಿ ನೂತನ ರಿಕ್ಷಾ ನಿಲ್ದಾಣ ಸ್ಥಾಪನೆಗಾಗಿ ಉಪ್ಪುಂದ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಸದಸ್ಯರು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರಿಗೆ ಮನವಿ ಸಲ್ಲಿಸಿದರು ಮನವಿಗೆ ಸ್ಪಂದಿಸಿದ ಶಾಸಕರು ಶಾಶ್ವತ ರಿಕ್ಷಾ ನಿಲ್ದಾಣದ ಬಗ್ಗೆ ಸ್ಥಳವನ್ನು ನಿಗದಿಮಾಡಿ ಸಂಬಂಧಪಟ್ಟ ಅಡೆತಡೆಗಳನ್ನು ನಿವಾರಿಸಿ ಶೀಘ್ರದಲ್ಲೇ ಹೊಸ ರಿಕ್ಷಾ ನಿಲ್ದಾಣ ಸ್ಥಾಪನೆಯ ಬಗ್ಗೆ ಭರವಸೆ ನೀಡಿದರು