ಕೋಟ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಗ್ರಾಮ ಪಂಚಾಯತಿನ ಚಿಟ್ಟಿಬೆಟ್ಟು ಪರಿಸರದಲ್ಲಿ ಪರಿಶಿಷ್ಟ ಪಂಗಡದ 8 ಹೊಸ ಮನೆ ನಿರ್ಮಾಣದ ಕಾಮಗಾರಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಪರಿಶೀಲನೆ ನಡೆಸಿದರು
ಕೋಟತಟ್ಟು ಗ್ರಾಮ ಪಂಚಾಯಿತಿನ ಮುತುವರ್ಜಿಯಿಂದ ಕರ್ಣಾಟಕ ಬ್ಯಾಂಕಿನವರ ಸಹಕಾರದೊಂದಿಗೆ ಹಾಗೂ ಈ ಭಾಗದ ದಾನಿಗಳ ಮೂಲಕ ಒಂದು ಉತ್ತಮವಾಗಿ ಗಟ್ಟಿಮುಟ್ಟಾದ ಸೌಲಭ್ಯವುಳ್ಳ ಮನೆಗಳನ್ನು ನಿರ್ಮಿಸಿ ಕೊಡುತ್ತಿರುವುದು ಈ ಬಗ್ಗೆ ಗ್ರಾಮ ಪಂಚಾಯತಿನವರಿಗೂ ಕರ್ಣಾಟಕ ಬ್ಯಾಂಕಿನವರೆಗೂ, ದಾನಿಗಳಿಗೆ ಕ್ಷೇತ್ರದ ಶಾಸಕರಾಗಿ ಕೃತಜ್ಞತೆ ಸಲ್ಲಿಸಿ ಫಲಾನುಭವಿಗಳಿಗೆ ಕರ್ಣಾಟಕ ಬ್ಯಾಂಕ್ ನವರ ಕೂಡ ಮಾಡಿದ ಚೆಕ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಆನಂದ.ಸಿ.ಕುಂದರ್. ಉಡುಪಿ ಜಿಲ್ಲಾ ಕರ್ನಾಟಕ ಬ್ಯಾಂಕಿನ ಅಸಿಸ್ಟೆಂಟ್ ಮೆನೇಜರ್ ವಾದಿರಾಜ್ ಭಟ್,ಕೋಟತಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ,, ಉಪಾಧ್ಯಕ್ಷೆ ಸರಸ್ವತಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್, ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು ಮತ್ತು ಗ್ರಾಮಸ್ಥರು, ಹಾಗೂ ಕೊರಗ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು

