ಚಿಕ್ಕಮಗಳೂರು : ಜಾತಿ, ಧರ್ಮಗಳನ್ನು ಒಡೆದು ಮನೆಹಾಳು ಮಾಡುವ ಕೆಲಸದಲ್ಲಿ ಪರಿಣತಿ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬಹುದು ಎಂದು ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಆರ್.ಅಶೋಕ್ ಆರೋಪಿಸಿದರು. ಸಿದ್ದರಾಮಯ್ಯ ಎಂದರೆ ಸಮಾಜವನ್ನು ಇಬ್ಬಾಗ ಮಾಡುವ ಬ್ಯಾಂಡ್ ಅಂಬಾಸಿಡರ್ ಇದ್ದಹಾಗೆ. ಈಗ ಅವರು ಕಾಂತರಾಜ ವರದಿ ಯನ್ನು ಕೊಡುತ್ತೇವೆ ಎನ್ನುತ್ತಿದ್ದಾರೆ. ಅವರ ಬಳಿ ಇರುವುದು ನಕಲಿ ವರದಿ, ಮೂಲ ವರದಿ ಕಳೆದುಹೋಗಿದೆ. ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಅದರ ಹೆಸರಲ್ಲಿ ಮೋಸ ಮಾಡುತ್ತ ಜಾತಿ ಜಾತಿ ಮಧ್ಯೆ ದ್ವೇಷ ತಂದಿಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು.
ಈಗ ಹಿಂದೂ ಧರ್ಮವನ್ನು ಒಡೆಯಲು ಮುಂದಾಗಿರುವ ಸಿದ್ದರಾಮಯ್ಯ ನಾನೂ ಹಿಂದೂ ಎಂದು ಹೇಳಿಕೊಂಡು ಓಡಾಡುತ್ತಾರೆ. ನನ್ನ ಹೆಸರಲ್ಲೂ ರಾಮನಿದ್ದಾನೆ ಎಂದು ಹೇಳುತ್ತಾರೆ. ವೀರಪ್ಪನ್ ಹೆಸರಲ್ಲಿ ವೀರ ಇಲ್ಲವೇ ಎಂದು ವ್ಯಂಗ್ಯವಾಗಿಡಿದರು.