Home »         ಹುಲಿವೇಷ ನೃತ್ಯ ಪ್ರದರ್ಶನ
 

        ಹುಲಿವೇಷ ನೃತ್ಯ ಪ್ರದರ್ಶನ

by Kundapur Xpress
Spread the love

ಕುಂದಾಪುರ : ನವರಾತ್ರಿಯಲ್ಲಷ್ಟೇ ವಿಶೇಷವಾಗಿ ಬಣ್ಣ ಹಚ್ಚಿ ಹೆಜ್ಜೆ ಹಾಕುವ ಪಾರಂಪರಿಕ ಹುಲಿವೇಷ ನೃತ್ಯ ಕುಂದಾಪುರದ ವೈಶಿಷ್ಟ್ಯವಾಗಿದೆ. ವಾದ್ಯ, ತಾಸ್ಮಾರ ಡೋಲು ಮೌರಿಯ ನಾದಕ್ಕೆ ಗೊಂಡೆಯಾಡಿಸುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಲಿವೇಷಗಳ ನೃತ್ಯ ನೋಡುವುದೇ ಕಣ್ಣಿಗೆ ಹಬ್ಬ.

ಅಳಿವಿನಂಚಿಗೆ ತೆರಳಿರುವ ಈ ಕಲೆಯನ್ನು  ಮತ್ತೆ ಮೇಲೆತ್ತಲು, ಬೆಳೆಸಲು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹುಲಿವೇಷದಾರಿಗಳ ತಂಡದೊಂದಿಗೆ ಬಹುವರ್ಷಗಳಿದ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷವೂ ವಿಶೇಷ ವೇದಿಕೆ ಸಿದ್ದಪಡಿಸಿ ಬಿನ್ನವಾದ ಶೈಲಿಯಲ್ಲಿ ನೃತ್ಯ ಪ್ರದರ್ಶನವನ್ನು ಆಯೋಜಿಸುತ್ತಿದೆ.

ಈ ಬಾರಿ ಆಕ್ಟೋಬರ್ 10 ರಂದು ಗುರುವಾರ ಸಂಜೆ 7.00 ಕ್ಕೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ವೇದಿಕೆಯಲ್ಲಿ ವಿದ್ಯುತ್ ದೀಪಾಲಂಕೃತ ವರ್ಣರಂಜಿತ ಬೆಳಕಿನಲ್ಲಿ ಈ ಕಾರ್ಯಕ್ರಮ ವಿಜೃಂಬಿಸಲಿದೆ. ಕುಂದಾಪುರ ಪರಿಸರದ ವಿವಿಧ ಹುಲಿವೇಷಧಾರಿಗಳ ತಂಡ ಇಲ್ಲಿ ಭಾಗವಹಿಸಿ ಕಲಾಸಕ್ತರನ್ನು ರಂಜಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹುಲಿವೇಷದಾರಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಮುಂದಿನ ಅನೇಕ ತಲೆಮಾರುಗಳಿಗೆ ಈ ಕಲೆ ಉಳಿಯುವಂತೆ ಕಲಾವಿದರನ್ನು ಹುರಿದುಂಬಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

   

Related Articles

error: Content is protected !!