ಕೋಟ : ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್-ಉಡುಪಿ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಭಾ. ಕೃ. ಅ. ಪ.ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಸ್ಕೋಡ್‌ವೆಸ್ ಸಂಸ್ಥೆ, ಆಯುಶ್ಮಾನ್ ಭವ ಸಂಸ್ಥೆ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಹಮ್ಮಿಕೊಂಡ ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರವನ್ನು ಕೋಡಿ ಹೊಸಬೆಂಗ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಇಬ್ರಾಹಿಂಪುರ ನೆರವೇರಿಸಿದರು. ಮೀನುಗಾರಿಕೆ ಮಾಹಾವಿದ್ಯಾಲಯ ಮಂಗಳೂರು ಇದರ ಪ್ರಾಧ್ಯಪಕ ಡಾ. ಶಿವಕುಮಾರ ಮಗದ ಇವರು ಮುತ್ತು ಕೃಷಿಯಿಂದ ಉದ್ಯಮಶೀಲತೆ ಮತ್ತು ಆರ್ಥಿಕ ಪ್ರಗತಿ ಬಗ್ಗೆ ವಿವರಿಸಿದರು .
ಈ ಸಂದರ್ಭದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ. ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಪ್ರಾಧ್ಯಪಕ ಡಾ. ಮಂಜುಲೇಶ್, ಕೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ,ಉದ್ಯಮಿ ಶಂಕರ್ ಕುಂದರ್, ಸಂಪನ್ಮೂಲ ವ್ಯಕ್ತಿಗಳಾಗಿ ಅಯುಷ್ಮಾನ್ ಸಂಸ್ಥೆ ನಿರ್ದೇಶಕರಾದ ಪ್ರಜ್ವಲ್ ,ಸಿದ್ದು ಪೂಜಾರಿ, ಎಫ್.ಪಿ.ಓ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಲೋಹಿತ್ ಖಾರ್ವಿ , ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷೆ ಬೇಬಿ ಮೆಂಡನ್, ಸಂಸ್ಥೆಯ ನಿರ್ದೇಶಕರಾದ ಸುದಿನ, ಪುಷ್ಪಾ ಶೆಟ್ಟಿ, ಕಾರ್ತಿಕ್, ರಾಹುಲ್, ಸಿಬ್ಬಂದಿಗಳಾದ ಭೂಮಿಕಾ ಶೆಟ್ಟಿ, ಸುಶ್ಮಿತಾ ಮೆಂಡನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ್ ನಾಯ್ಕ್ ನೆರವೇರಿಸಿದರು.