Home » ಯೋಜನೆಗಳ ಉಧ್ಘಾಟನೆಗೆ ಸಮಯವಿಲ್ಲ
 

ಯೋಜನೆಗಳ ಉಧ್ಘಾಟನೆಗೆ ಸಮಯವಿಲ್ಲ

ಪಿ ಎಂ ಮೋದಿ

by Kundapur Xpress
Spread the love

ಗುರುಗ್ರಾಮ: ಪ್ರಸಕ್ತ ವರ್ಷ ದೇಶಾದ್ಯಂತ 10 ಲಕ್ಷ ಕೋಟಿ ರು.ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಾಗಿದೆ. ಈ ಪೈಕಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ಹೋಗಲೂ ಸಮಯವಿಲ್ಲದಾಗಿದೆ. ಇದಲ್ಲದೆ, ತಮ್ಮ 3ನೇ ಅವಧಿಯ 5 ವರ್ಷದಲ್ಲಿ ದೇಶವು ಮೂಲಸೌಕರ್ಯ ಅಭಿವೃದ್ಧಿ ಪರ್ವವನ್ನೇ ಕಾಣಲಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

1 ಲಕ್ಷ ಕೋಟಿ ರು.ಮೌಲ್ಯದ 114 ರಾಷ್ಟ್ರೀಯ ಹೆದ್ದಾರಿಗಳಿಗೆ  ಚಾಲನೆ ನೀಡಿ ಸೋಮವಾರ ಇಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 5 ವರ್ಷದಲ್ಲಿ ದೇಶವನ್ನು ವಿಶ್ವದಲ್ಲೇ 3ನೇ ಅತಿ ದೊಡ್ಡ ಅರ್ಥಿಕತೆಯನ್ನಾಗಿ ಮಾಡಲು ನಮ್ಮ ಸರ್ಕಾರ ಮೂಲಸೌಕರ್ಯ ಯೋಜನೆಗಳಿಗೆ ಭಾರೀ ವೇಗ ನೀಡಿದೆ ಎಂದು ಹೇಳಿದರು. ಇದೇ ವೇಳೆ, ‘ನಮ್ಮ ಸರ್ಕಾರ ದೇಶದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನೀಡುತ್ತಿರುವ ವೇಗ ನೋಡಿ ಕಾಂಗ್ರೆಸ್ ಮತ್ತು ಅದರ  ಮಿತ್ರ ಪಕ್ಷಗಳಿಗೆ ನಿದ್ದೆ ಹಾರಿ ಹೋಗಿದೆ’ ಎಂದು ಮೋದಿ ವ್ಯಂಗ್ಯವಾಡಿದರು

   

Related Articles

error: Content is protected !!