Home » ಮತೀಯ ಮೀಸಲು ಜಾರಿಗೆ ಕೈ ಹುನ್ನಾರ
 

ಮತೀಯ ಮೀಸಲು ಜಾರಿಗೆ ಕೈ ಹುನ್ನಾರ

by Kundapur Xpress
Spread the love

ಛತ್ತೀಸ್‌ಗಢ : ವೋಟ್ ಬ್ಯಾಂಕ್ ಹಸಿವೆಯಿಂದ ತತ್ತರಿಸುತ್ತಿರುವ ಕಾಂಗ್ರೆಸ್ ಮತೀಯ ಆಧಾರದಲ್ಲಿ ಮೀಸಲಾತಿ ಜಾರಿಗೊಳಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ವಿಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ. ದೇಶದಲ್ಲಿ ವಂಶಪಾರಂಪರ್ಯ ತೆರಿಗೆ ಜಾರಿಗೊಳಿಸಲು ಲೆಕ್ಕ ಹಾಕಿದೆ. ಈ ಮೂಲಕ ದೇಶವಾಸಿ ಜನರ, ಅವರ ಮಕ್ಕಳ ಸೊತ್ತು ಮತ್ತು ಹಕ್ಕುಗಳನ್ನು ದೋಚುವುದು ಕಾಂಗ್ರೇಸ್ಷಡ್ಯಂತ್ರವೆಂದು ಮೋದಿ ವಾಗ್ದಾಳಿ ನಡೆಸಿದರು.  ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿನ ಅಂಶಗಳು ಈಗ ಪ್ರಧಾನಿ ಹೇಳಿಕೆಯನ್ನು ಪುಷ್ಟಿಕರಿಸಿದ ಬೆನ್ನಿಗೇ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತಗೊಳಿಸುವ ಕಾಂಗ್ರೆಸ್ ನಿಲುವು ಭಾರಿ ಚರ್ಚೆಗೆ ಗ್ರಾಸವಾಗಿದೆ.

   

Related Articles

error: Content is protected !!