ಮಂಗಳೂರು : ಶ್ರೀಮತಿ ಜೀವಿತ ನಾಗೇಶ್ ಪಡು ಮತ್ತು ಕುಟುಂಬದವರು ನೂತನ ರಂಗಮಂದಿರವನ್ನು ಉದ್ಘಾಟಿಸಿದರು ಆನಂತರ ನಡೆದ ರಂಗಮಂಟಪದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ತುಪ್ಪೆಕಲ್ಲು ಶ್ರೀ ಉಳ್ಳಾಕ್ಲು ಮೃಗಂತಾಯಿ ದೈವಸ್ಥಾನದ ಗಡಿಕಾರ ಶ್ರೀ ಸದಾನಂದ ಆಳ್ವ ಕಂಪ ಇವರು ಅಧ್ಯಕ್ಷತೆ ವಹಿಸಿ ಊರು ಸಾಧಕರನ್ನು ನೆನಪಿಡಬೇಕು. ಅವರ ಅಗಲುವಿಕೆಯ ಕಹಿ ನೆನಪನ್ನು ಅವರದ್ದೇ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸವಿಯನ್ನಾಗಿಸಬೇಕು. ನಾಗೇಶ್ ಪಡು ಅವರ ಆದರ್ಶಗಳು ಈ ರಂಗಮಂಟಪದ ಮೂಲಕ ಮುಂದಿನ ಎಳೆಯರ ಕಣ್ಣೆದುರು ನಿಲ್ಲುವಂತಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ಪಕ್ಕಳಪಾದೆ ಶ್ರೀಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮದ ಹರೀಶ್ ಪೆರ್ಗಡೆ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕೋಶಾಧಿಕಾರಿ ಉಮೇಶ್ ಬೆಂಜನಪದವು, ಮಂದಿರದ ಗೌರವ ಅಧ್ಯಕ್ಷರಾದ ಶಿವಪ್ಪ ಸುವರ್ಣ, ಅಧ್ಯಕ್ಷರಾದ ವಸಂತ ಬಡ್ಡೂರು ಉಪಸ್ಥಿತರಿದ್ದರು. ಧಾರ್ಮಿಕ ರಂಗದ ಸೇವೆಗಾಗಿ ಶಿವಪ್ಪ ಸುವರ್ಣ ಮತ್ತು ಪೊಲೀಸ್ ಇಲಾಖೆಯಲ್ಲಿ ಸಿ ಆರ್ ಆಗಿ ಬಡ್ತಿ ಹೊಂದಿದ ಅರುಣ್ ಕುಮಾರ್ ಪಾದೆಮಾರ್ ಅವರನ್ನು ಸನ್ಮಾನಿಸಲಾಯಿತು. ಮಂದಿರದ ಸದಸ್ಯರಾದ ನಾಗಭೂಷಣ್ ಪ್ರಾರ್ಥನೆ ನಡೆಸಿದರು. ವಿಶುಕುಮಾರ್ ಸ್ವಾಗತಿಸಿದರು. ಶಿವಪ್ಪ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ್ ಪಕ್ಕಳಪಾದೆ ವಂದಿಸಿದರು. ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಪ್ರತಿಭೆಗಳು ಮತ್ತು ಶ್ರೀ ಸರಸ್ವತಿ ಬಾಲಗೋಕುಲದ ವಿದ್ಯಾರ್ಥಿಗಳಿಂದ ತುಳುನಾಡ ವೈಭವ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಆನಂತರ ಶಾರದಾ ಆರ್ಟ್ಸ್ ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ತುಳು ಹಾಸ್ಯಮಯ ನಾಟಕ ನಡೆಯಿತು