ಕೋಟ : ಇದೇ ಬರುವ ಡಿ.5ರಂದು ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇಗುಲದ ವಾರ್ಷಿಕ ರಥೋತ್ಸವ ಜರುಗಲಿದ್ದು ಈ ದಿಸೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ವಿವಿಧ ಸಂಘಸAಸ್ಥೆಗಳ ಸಹಯೋಗದೊಂದಿಗೆ 232ನೇ ಸ್ವಚ್ಛತಾ ಅಭಿಯಾನ ದೇಗುಲದ ವಠಾರ ಸ್ವಚ್ಛಗೊಳಿಸುವ ಮೂಲಕ ನೆರವೇರಿತು. ಸ್ವಚ್ಛತಾ ಅಭಿಯಾನಕ್ಕೆ ದೇಗುಲದ ಮುಕ್ತೇಸರರಾದ ಶ್ರೀರಮಣ ಉಪಾಧ್ಯಾಯರವರು ಚಾಲನೆ ನೀಡಿದರು. ದೇಗಲದ ಮೆನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿವರ್ಗ,ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್,ಸಂಚಾಲಕ ಅಮೃತ್ ಜೋಗಿ,ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.