Home » ಪಂಚವರ್ಣ ಹಸಿರು ಅಭಿಯಾನ ಮಾದರಿ ಕಾರ್ಯಕ್ರಮ
 

ಪಂಚವರ್ಣ ಹಸಿರು ಅಭಿಯಾನ ಮಾದರಿ ಕಾರ್ಯಕ್ರಮ

ಸಹಾಯಕ ಆಯುಕ್ತೆ ರಶ್ಮಿ

by Kundapur Xpress
Spread the love

ಕೋಟ: ಸದಾ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಪಂಚವರ್ಣದ ಕಾರ್ಯ ವೈಖರಿ ಇಡೀ ಮನುಕುಲಕ್ಕೆ ಮಾದರಿಯಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಹೇಳಿದರು.ತೆಕ್ಕಟ್ಟೆ ಗಣಪತಿ ಶ್ರೀಯಾನ್ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ವಿವಿಧ ಸಂಘಸAಸ್ಥೆಗಳ ಸಹಯೋಗದೊಂದಿಗೆ ೨೭೦ನೇ  ಪರಿಸರಸ್ನೇಹಿ ಹಸಿರುಜೀವ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ ಸಂಘಸAಸ್ಥೆಗಳು ಸಾಮಾನ್ಯವಾಗಿ ಕಾರ್ಯಕ್ರಮಗಳನ್ನು ನೀಡುತ್ತವೆ ಆದರೆ ಪಂಚವರ್ಣ ಸಂಘಟನೆ ಒಂದು ಹೆಜ್ಜೆ ಮುಂದೆ ಇರಿಸಿ ನಿರಂತರ ಆರು ವರ್ಷಗಳಿಗೂ ಅಧಿಕವಾಗಿ ಪ್ರಕೃತಿಯನ್ನು ಆರಾಧಿಸುವ ಉಳಿಸುವ ಕಾಯಕ ನಿಜಕ್ಕೂ ಶ್ಲಾಘನೀಯ ಇಂತಹ ಸಂಘಟನೆ ಗ್ರಾಮ ಗ್ರಾಮದಲ್ಲಿ ಹುಟ್ಟಿಕೊಳ್ಳಲಿ ಎಂದು ಹಾರೈಸಿದರು.
ಇದೇ ವೇಳೆ ಸಹಾಯಕ ಆಯುಕ್ತೆ ರಶ್ಮಿ ಗಿಡವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.ಪೂರ್ವಾಹ್ನ ಏಳು ರಿಂದ ಹಲವು ಮನೆಗಳಿಗೆ ತೆರಳಿ ಗಿಡ ನೆಟ್ಟು ಅದರ ಮಹತ್ವ ತಿಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ. ಕೆ.ಮನೋಹರ್ ಪೂಜಾರಿ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಮಾಜಿ ಜಿ.ಪಂ ಸದಸ್ಯ ಟಿ.ಗಣಪತಿ ಶ್ರೀಯಾನ್,ತೆಕ್ಕಟ್ಟೆ ಗ್ರಾ.ಪಂ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಪಡುಕರೆ,ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.ಮಹಿಳಾಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

 

Related Articles

error: Content is protected !!