Home » ಕುಂದಾಪುರ:ಮನ್ ಕೀ ಬಾತ್ ತಂಡಕ್ಕೆ ಅಭಿನಂದನೆ
 

ಕುಂದಾಪುರ:ಮನ್ ಕೀ ಬಾತ್ ತಂಡಕ್ಕೆ ಅಭಿನಂದನೆ

by Kundapur Xpress
Spread the love

ಉಡುಪಿ: ಆಗಸ್ಟ್ 31ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ನೇರ ಪ್ರಸಾರದ ವೀಕ್ಷಣೆ ಮತ್ತು ಫೋಟೋ ಅಪ್ಲೋಡ್ ಪ್ರಕ್ರಿಯೆಯಲ್ಲಿ ಬಿಜೆಪಿ ಕುಂದಾಪುರ ಮಂಡಲಗಳಲ್ಲಿ 100% ಪ್ರಗತಿ ಸಾಧಿಸಿ ಪ್ರತೀ ಬೂತ್ ಮಟ್ಟದಲ್ಲಿ ಸರಲ್ ಆಪ್’ ನಲ್ಲಿ ಫೋಟೋ ಮತ್ತು ವರದಿ ಅಪ್ಲೋಡ್ ಮಾಡುವ ಮೂಲಕ 100% ಸಾಧನೆಯೊಂದಿಗೆ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಮನ್ ಕಿ ಬಾತ್ ತಂಡವನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮನ್ ಕೀ ಬಾತ್’ ಕಾರ್ಯಕ್ರಮಕ್ಕೆ ಯಶಸ್ವಿಗೆ ಕಾರಣಿಕರ್ತರಾದ
ಬಿಜೆಪಿ ಕುಂದಾಪುರ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್ ಮನ್ ಕೀ ಬಾತ್ ಕುಂದಾಪುರ ಮಂಡಲ ಸಂಚಾಲಕರದ ಸತೀಶ್ ಪೂಜಾರಿ ವಕ್ವಾಡಿ,ಸಹ ಸಂಚಾಲಕರಾದ ರೂಪಾ ಪೈ, ನೇತ್ರಾವತಿ ಮಡಿವಾಳ ಹಾಗೂ ಸಹಕರಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳ ಪರವಾಗಿ ಅಭಿನಂದಿಸಿದರು.

 

Related Articles

error: Content is protected !!