ಸ್ವಚ್ಛತೆ ಪ್ರತಿಯೊಬ್ಬರ ಧ್ಯೇಯವಾಗಬೇಕು- ರಾಜೇಶ್ ಉಪಾಧ್ಯಾ ಕೋಟ: ಸ್ವಚ್ಛತೆ ಪ್ರತಿಯೊಬ್ಬರ ಧ್ಯೇಯವಾಗಬೇಕು ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಸಂಚಕಾರ ತಪ್ಪಿದಲ್ಲ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಪಾರಂಪಳ್ಳಿ ರಾಜೇಶ ಉಪಾಧ್ಯಾ ಅಭಿಪ್ರಾಯಪಟ್ಟರು. ಭಾನುವಾರ ಸಾಲಿಗ್ರಾಮ ಪಾರಂಪಳ್ಳಿ ಪಡುಕರೆ ಬೀಚ್ ನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ,ಮಣೂರು ಫ್ರೆಂಡ್ಸ್ ,ಸಾಲಿಗ್ರಾಮ ಪಟ್ಟಣಪಂಚಾಯತ್ ,ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಇವರುಗಳ ಸಹಯೋಗದೊಂದಿಗೆ 237ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಪಂಚವರ್ಣ ಸಂಸ್ಥೆ ಹಮ್ಮಿಕೊಂಡ ಪಕೃತಿ ಉಳಿಸುವ ಕಾರ್ಯ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಶ್ರೇಯಸ್ಸು ಆದರೆ ಪ್ರಸ್ತುತ ಜನಸಾಮಾನ್ಯರು ಇದರ ಬಗ್ಗೆ ನಿರ್ಲಕ್ಷ್ಯತೆಯ ಧೋರಣೆ ತುಂಬಾ ನೋವುಂಟು ಮಾಡುತ್ತಿದೆ ಈ ನಿಟ್ಟಿನಲ್ಲಿ ಎಲ್ಲಾ ಭಾಗದ ಸಂಘಸಂಸ್ಥೆಗಳು ಇದರ ಬಗ್ಗೆ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿನ್ ಲೈಟ್ ಸ್ಪೋಟ್ಸ್೯ ಕ್ಲಬ್ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ,ಪಂಚವರ್ಣ ಯುವಕ ಮಂಡಲ ನೂತನ ಅಧ್ಯಕ್ಷ ಕೆ.ಮನೋಹರ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ,ಮಣೂರು ಫ್ರೆಂಡ್ಸ್ನ ದಿನೇಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ,ಪಟ್ಟಣಪಂಚಾಯತ್ ಪೌರಕಾರ್ಮಿಕರು,ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.