ಕೋಟ: ಜಗತ್ತಿಗೆ ಮಾದರಿ ಎನಿಸಿದ ಸಂವಿಧಾನವನ್ನು ಈ ದೇಶಕ್ಕೆ ಬಳುವಳಿಯಾಗಿ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ರವರು ವ್ಯಕ್ತಿಯಲ್ಲ ಬದಲಾಗಿ ಅವರೊಬ್ಬ ಶಕ್ತಿಯಾಗಿ ಕಂಡಿದ್ದಾರೆ ಎಂದು ಸಾಹಿತಿ ,ಶಿಕ್ಷಕ ಸಂತೋಷ್ ಕುಮಾರ್ ಕೋಟ ನುಡಿದರು.
ಭಾನುವಾರ ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 133ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಭನಮನಗೈದು ಮಾತನಾಡಿ ಪ್ರಸ್ತುತ ಜಾತಿ, ಮತ ಧರ್ಮದ ಆಧಾರದಲ್ಲಿ ತೂಗುತ್ತಿರುವ ಕಾಲಘಟ್ಟದಲ್ಲಿ ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ತಿಳಿಯಪಡಿಸಬೇಕಿದೆ, ವಿಶ್ವ ಮಟ್ಟದಲ್ಲಿ ಅಂಬೇಡ್ಕರ್ ಚಿಂತನೆ ,ಆದರ್ಶ ಎಲ್ಲಾ ವರ್ಗಕ್ಕೆ ಸಮಾನತೆಯನ್ನು ಸಾರಿ ಬುದ್ಧ ಬಸವಣ್ಣ ನಾರಾಯಣಗುರುಳಂತೆ ಅಂಬೇಡ್ಕರ್ ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶ ಅವರು ನೀಡಿದ ಸಂವಿಧಾನದ ಶ್ರೇಷ್ಠತೆ ಸಾಮಾನ್ಯವರ್ಗಕ್ಕೆ ವರವಾಗಿ ಪರಿಣಮಿಸಿದೆ ಇಂಥಹ ಮಹಾನ್ ಚೇತನ ಬದುಕಿನ ಆಯಾಮವನ್ನು ಪ್ರಸ್ತುತ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಯುವಕ ಮಂಡಲಗಳಿಂದ ಆಗಬೇಕಿದೆ ಇದೇ ಮೊದಲ ಬಾರಿ ಸರಕಾರಿ ಕಾರ್ಯಕ್ರಮಗಳಂತೆ ಪಂಚವರ್ಣ ,ಇಂಡಿಕಾ ಸಂಸ್ಥೆಗಳು ಆಚರಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ದೇಗುಲದ ನಿಕಟಪೂರ್ವ ಟ್ರಸ್ಟಿ ಎಂ.ಸುಬ್ರಾಯ ಆಚಾರ್,ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು ಪಡುಕರೆ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿದರು.
ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ,ಶಿಕ್ಷಕ ಸಂತೋಷ್ ಕುಮಾರ್ ಕೋಟ ಪುಷ್ಭನಮನಗೈದರು. ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಕೋಟ ಅಮೃತೇಶ್ವರಿ ದೇಗುಲದ ನಿಕಟಪೂರ್ವ ಟ್ರಸ್ಟಿ ಎಂ.ಸುಬ್ರಾಯ ಆಚಾರ್ ಮತ್ತಿತರರು ಇದ್ದರು.