ಪೂರ್ವಭಾವಿ ಸಭೆ, ಸಮಿತಿ ರಚನೆ ಕೋಟ: ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ಭಾನುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶತಮಾನೋತ್ಸವದ ವಿಚಾರಗಳ ಬಗ್ಗೆ ಚರ್ಚೆ ನಡೆದು ಶತಮಾನೋತ್ಸವ ಸಮಿತಿ ರಚಿಸುವ ಕುರಿತು ನಿರ್ಣಯಿಸಲಾಯಿತು ಅದರಂತೆ ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಎಮ್, ಸಿ. ಚಂದ್ರಶೇಖರ್ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ರೆ. ಫಾ. ಸುನಿಲ್ ಡಿಸಿಲ್ವ ,ಗೌರವ ಸಲಹೆಗಾರರಾಗಿ ಎ.ಪಿ ಮದ್ಯಸ್ಥ, ರಮೇಶ್, ಶೇಖರ್ ಪೂಜಾರಿ, ಸುಶೀಲ ಪೂಜಾರಿ ,ಉಪಾಧ್ಯಕ್ಷರುಗಳಾಗಿ ನಾರಾಯಣ ಆಚಾರ್, ಲೀಲಾವತಿ ಗಂಗಾಧರ ಪೂಜಾರಿ ,ಪ್ರಧಾನ ಕಾರ್ಯದರ್ಶಿ ದಿನಕರ್ ,ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಪೂಜಾರಿ ,ಕೋಶಾಧಿಕಾರಿ ವಿಶ್ವನಾಥ್ ಆಚಾರ್ ಅಲ್ಲದೆ ಆಗಸ್ಟ್ ಅಂತ್ಯಕ್ಕೆ ಶತಮಾನೋತ್ಸವ ಸಮಿತಿಯ ನೇತ್ರತ್ವದಲ್ಲಿ ಇನ್ನುಳಿದ ಉಪ ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳಿಗೆ ಅಂತಿಮ ರೂಪ ನೀಡುವುದರ ಬಗ್ಗೆ ಸಭೆ ತೀರ್ಮಾನಿಸಿತು. ಕೃಷ್ಣ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಆಲ್ವಿನ್ ಅಂದ್ರದೆ ನಿರೂಪಿಸಿ ವಂದಿಸಿದರು.