ಉಡುಪಿ :ಪುತ್ತಿಗೆ ಮಠದಲ್ಲಿ ಪರ್ಯಾಯೋತ್ಸವ ಸಮಿತಿಯ ಸಮಾಲೋಚನಾ ಸಭೆಯು ಸಮಿತಿಯ ಅಧ್ಯಕ್ಷರಾದ ಡಾ| ಹೆಚ್. ಎಸ್ .ಬಲ್ಲಾಳ್ ರವರ ಉಪಸ್ಥಿತಿಯಲ್ಲಿ ಜರಗಿತು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಯಶಪಾಲ್ ಸುವರ್ಣರು ಮಾತನಾಡುತ್ತಾ ಈ ಬಾರಿಯ ಪರ್ಯಾಯೋತ್ಸವಕ್ಕೆ ಸರಕಾರದಿಂದ ಹೆಚ್ಚಿನ ಅನುದಾನದ ಬೇಡಿಕೆಯನ್ನು ಸಲ್ಲಿಸಿದ್ದು ಸರ್ಕಾರವು ಭಕ್ತರ ಬೇಡಿಕೆಗೆ ಸ್ಪಂದಿಸುವ ಆಶಾಭಾವನೆ ಇದೆ ˌ
ಪುತ್ತಿಗೆ ಪರ್ಯಾಯವು ವಿಶ್ವ ಪರ್ಯಾಯವಾಗಿ ಪರಿಗಣಿಸಲ್ಪಟ್ಟಿದೆ ದೇಶಾದ್ಯಾಂತ ಶ್ರೀ ಕೃಷ್ಣನ ದೇವಾಲಯಗಳನ್ನು ಸ್ಥಾಪಿಸಿ ಕೃಷ್ಣನ ಸಂದೇಶವನ್ನು ಬಿತ್ತರಿಸಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು ˌ ಪರ್ಯಾಯಕ್ಕೆ ದೇಶ ಹಾಗೂ ವಿದೇಶಗಳಿಂದ ಭಕ್ತರು ಆಗಮಿಸುವುದರಿಂದ ಅವರ ವಾಸ್ತವ್ಯದ ಬಗ್ಗೆಯೂ ಗಮನಹರಿಸಬೇಕಾಗಿದೆ ಎಂದರುˌ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕ ಕೆ.ರಘುಪತಿ ಭಟ್ ˌ ಕೋಶಾಧಿಕಾರಿಗಳಾದ ರಂಜನ್ ಕಲ್ಕೂರ್ˌ ಹಾಗೂ ವಿವಿಧ ಸಮಿತಿಗಳ ನಾಗೇಶ್ ಹೆಗಡೆˌ, ಕೇಶವ ಕೋಟ್ಯಾನ್, ರಾಮಚಂದ್ರ ಉಪಾಧ್ಯಾಯ, ಗುರುರಾಜ ಆಚಾರ್ಯ , ಮುರಲಿ ಕಡೆಕಾರ್ ˌ ಭಾಸ್ಕರ ರಾವ್ ಕಿದಿಯೂರು, ನಾಗರಾಜ ತಂತ್ರಿ, ಹಯವದನ ಭಟ್, ಚಂದ್ರಕಾಂತ್,ˌ ಎಂ .ಎಸ್. ವಿಷ್ಣು, ಪದ್ಮಲತಾ ವಿಷ್ಣು, ಸುಮಿತ್ರಾ ಕೆರೆಮಠ, ಜಿ.ವಿ.ಆಚಾರ್ಯ, ಹಾಗೂ ಇತರ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಮಠದ ದಿವಾನರಾದ ನಾಗರಾಜ ಆಚಾರ್ಯರು ಸ್ವಾಗತಿಸಿ ರವೀಂದ್ರ ಆಚಾರ್ಯರು ಧನ್ಯವಾದವಿತ್ತರು