ಉಡುಪಿ : ಕೃಷ್ಣಮಠದಲ್ಲಿ ಇಂದಿನಿಂದ 252ನೇ ಪರ್ಯಾಯ ಆರಂಭವಾಗಿದೆ ಮುಂದಿನೆರಡು ವರ್ಷಗಳ ಕಾಲ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಭಕ್ತರು ಗೀತೆಯನ್ನು ನಿತ್ಯ ಬರೆಯುವ ಸಂಕಲ್ಪ ಈಡೇರಿಸುವ ವಿಶ್ವ ಗೀತಾ ಪರ್ಯಾಯ ಕೃಷ್ಣಮಠದ ಇತಿಹಾಸದಲ್ಲೊಂದು ಸುವರ್ಣಾಕ್ಷರದಲ್ಲಿ ಬರೆಯುವ ಕಾಲ ಸನ್ನಿಹಿತವಾಗಿದೆ
ಶ್ರೀಮದುಪೇಂದ್ರ ಮಹಾಸಂಸ್ಥಾನ ಪುತ್ತಿಗೆ ಮಠದ 29ನೇ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಮುಂಜಾನೆ 5.55 ರ ಸೂರ್ಯೋದಯದ ಗಳಿಗೆಯಲ್ಲಿ ಸರ್ವಜ್ಞ ಪೀಠಾವನ್ನೇರಿ ಎರಡು ವರ್ಷಗಳ ಕಾಲ ಕೃಷ್ಣ ಪೂಜೆಯ ಧೀಕ್ಷೆ ಸ್ವೀಕರಿಸಿದರು.
ಶ್ರೀಪಾದರಿಬ್ಬರು ಮೆರವಣಿಗೆಯಲ್ಲಿ ಬರುವಾಗ ದಾರಿ ಮಧ್ಯೆ ಮನೆಯವರು ಶ್ರೀಗಳಿಗೆ ಆರತಿ ಎತ್ತಿ ಮಾಲಾರ್ಪಣೆ ಮಾಡಿ ಗೌರವಿಸುತ್ತಿದರು ಮಧ್ಯರಾತ್ರಿ 1.00 ಗಂಟೆಗೆ ಸುಮಾರು 2.00 ಕಿ.ಮೀ. ದೂರವಿರುವ ಜೋಡುಕಟ್ಟೆಯಿಂದ ಮೆರವಣಿಗೆ ರಥಬೀದಿಗೆ ಬರುವುದಕ್ಕೆ ಎರಡು ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದು ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ವೈವಿಧ್ಯಮಯ ಟ್ಯಾಬ್ಲೊ ವೇಷಧಾರಿಗಳು ವಾದ್ಯಘೋಷಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿತ್ತು