Home » ಪುತ್ತಿಗೆ ಶ್ರೀಪಾದರಿಗೆ ದ್ವಾರಕೆ ಪೌರಾಭಿನಂದನೆ
 

ಪುತ್ತಿಗೆ ಶ್ರೀಪಾದರಿಗೆ ದ್ವಾರಕೆ ಪೌರಾಭಿನಂದನೆ

by Kundapur Xpress
Spread the love

ಉಡುಪಿ : ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಪರ್ಯಾಯ ಪೂರ್ವಭಾವಿ ಭಾರತ ಪರಿಕ್ರಮ ಯಾತ್ರೆಯಲ್ಲಿ ಮೋಕ್ಷಪ್ರದ ದ್ವಾರಕಾ ಕ್ಷೇತ್ರ ಯಾತ್ರೆ ನಡೆಸಿ ಗೋಮತಿ ನದಿ ಸಾಗರಸಂಗಮದಲ್ಲಿ ತೀರ್ಥ ಸ್ಥಾನ ನಡೆಸಿದರು. ಭಕ್ತರೊಂದಿಗೆ ದ್ವಾರಕಾಧೀಶ ಕೃಷ್ಣನ ದರ್ಶನ ಗೈದು ಪಲಿಮಾರು ಮಠದ ದ್ವಾರಕಾ ಶಾಖೆ ಮಧ್ವ ಮಠದಲ್ಲಿ ಶ್ರೀ ಉಪೇಂದ್ರ ವಿಠಲ ದೇವರ ಸಂಸ್ಥಾನ ಪೂಜೆಯನ್ನು ನಡೆಸಿದರು.

ಸಂಜೆ ನಡೆದ ಸರಳ ಸಮಾರಂಭದಲ್ಲಿ ದ್ವಾರಕೆಯ ಪೌರಾಭಿನಂದನೆಯನ್ನು ದ್ವಾರಕೆಯ ಮಾಜಿ ಮೇಯರ್ ದ್ವಾರಕಾ ಬ್ರಾಹ್ಮಣ ಸಮಾಜದ ಪ್ರಮುಖ ಭಾರತ್ ಕರಾಡಿಯ ,ಆರ್ ಎಸ್ ಎಸ್ ತಾಲೂಕು ಪ್ರಚಾರಕರಾದ ಮಹೇಶ್ ವ್ಯಾಸ ,ಆರ್ ಎಸ್ ಎಸ್ ಜಿಲ್ಲಾ ಕಾರ್ಯವಾಹಕ ಜಗದೀಶ್ ಬಾಯಿ, ದೇವಸ್ಥಾನದ ರಕ್ಷಣಾ ಮುಖ್ಯಸ್ಥರು, ನಗರಸಭಾ ಸದಸ್ಯರು ಮತ್ತು ಬೋಲೇ ಬಾಬಾ ವಾಸ್ತು ಭಂಡಾರ ಉದ್ಯಮಿ ಭಾವಿ ಪರ್ಯಾಯ ಶ್ರೀಪಾದರಿಗೆ ಗುರುವಂದನೆಯನ್ನು ಸಮರ್ಪಿಸಿದರು.

 

Related Articles

error: Content is protected !!