ಉಡುಪಿ : ಬಡವರಿಗೆ ಸೂರು ಕಲ್ಪಿಸುವ ಮೂಲಕ ಅಯೋಧ್ಯೆ ಶ್ರೀರಾಮಚಂದ್ರನಿಗೆ ಸೇವೆ ಸಲ್ಲಿಸಿದಂತಾಗುವುದು ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಶ್ರೀಗಳ ರಾಮ ರಾಜ್ಯದ ಪರಿಕಲ್ಪನೆಯಂತೆ ಉಡುಪಿ ಉದ್ಯಮಿಗಳು, ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಮಾಲೀಕರಾದ ರಾಜಗೋಪಾಲ್ ಆಚಾರ್ಯ ಅವರು ರಾಮ ಜನ್ಮಭೂಮಿ ಅಯೋಧ್ಯ ಶ್ರೀರಾಮ ಮಂದಿರದಲ್ಲಿ ಕಲಶ ಪೂಜೆಯ ಸಂದರ್ಭದಲ್ಲಿ ಮಾಡಿದ ಸಂಕಲ್ಪದಂತೆ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಕಡಿಯಾಳಿ ಮೂಲಕ ಅರ್ಹ ಗುಂಡಿಬೈಲು ಪಾಡಿಗಾರಿನಲ್ಲಿ ಮಾಲಾಶ್ರೀ ಭಟ್ ಕುಟುಂಬಕ್ಕೆ ಮನೆ ಕಟ್ಟಿಕೊಡಲು ನಿರ್ಧರಿಸಿದ್ದು ಶಿಲನ್ಯಾಸ ನಡೆಸಲಾಯಿತು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್, ಸದಸ್ಯರಾದ ಸಂದೀಪ್ ಸನಿಲ್, ವಿದ್ಯಾ ಶ್ಯಾಮ್ ಸುಂದರ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇದರ ಸದಸ್ಯರಾದ ಸಂಧ್ಯಾ ರಮೇಶ್, ಸಂಧ್ಯಾ ಪ್ರಭು, ಸಂತೋಷ ಕಿಣಿ, ನಗರಸಭಾ ಸದಸ್ಯೆ ಗೀತಾ ಶೇಟ್, ಮುರಳಿಧರ್ ರಾವ್ ಗುಂಡಿಬೈಲು, ಮಂಜುನಾಥ್ ಹೆಬ್ಬಾರ್, ಭಾರತಿ ಚಂದ್ರಶೇಖರ್, ಸುಜಲ ಸತೀಶ್, ರಾಕೇಶ್ ಜೋಗಿ, ವಾಸುದೇವ ಭಟ್ ಪರಂಪಳ್ಳಿ ಉಪಸ್ಥಿತರಿದ್ದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಈ ಮನೆಗೆ ಆರ್ಥಿಕ ಸಹಕಾರ ನೀಡಿದ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ನ ಮಾಲೀಕರಾದ ರಾಜಗೋಪಾಲ ಆಚಾರ್ಯ ದಂಪತಿ ಇವರಿಗೆ ಸ್ವಾಮೀಜಿ ಸನ್ಮಾನಿಸಿದರು. ಮನೆಯ ಫಲಾನುಭವಿಯಾದ ಮಾಲಾಶ್ರೀ ಭಟ್ ಪಾಡಿಗಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು