ಕುಂದಾಪುರ : ಇತ್ತೀಚಿಗೆ ಜನರು ಹೆಚ್ಚಾಗಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬ ಮತ್ತು ಸಿಲ್ವರ್ ಕೋಟಿಂಗ್ ಇರುವ ಡಬ್ಬಗಳಲ್ಲಿ ಪಾರ್ಸೆಲ್ ತಂದು ತಿನ್ನುವುದು, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ಸಾಮಾನ್ಯವಾಗಿದೆ ಊಟ ಪಾರ್ಸೆಲ್ ತರುವವರು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ತಂದು ತಿನ್ನುತ್ತಾರೆ ಪೇಪರ್ ಡಬ್ಬ ಅಂತ ಹೇಳಿದರೂ ಅದಕ್ಕೆ ಕೋಟಿಂಗ್ ಇರುತ್ತದೆ
ಇದರಿಂದ ಥೈರಾಯಿಡ್ ಸಮಸ್ಯೆಗಳು, ನರ ಸಂಬಂಧಿ ಖಾಯಿಲೆಗಳು, ಮುಟ್ಟಿನ ಸಮಸ್ಯೆಗಳು ಗರ್ಭಕೋಶದ ಸಮಸ್ಯೆಗಳು,ರಕ್ತ ಮತ್ತು ಮೂತ್ರದ ಸಮಸ್ಯೆಗಳು, ಹೃದಯ ಸಂಬಂಧಿ ರೋಗಗಳು, ಅಸ್ತಮಾ, ಕೂದಲು ಉದುರುವುದು, ಚರ್ಮ ರೋಗಗಳು, ಕ್ಯಾನ್ಸರ್ ನಂತಹ ಮಾರಣಾ0ತಿಕ ಖಾಯಿಲೆಗಳು ಬರುತ್ತವೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ
ಮಕ್ಕಳಿಗೆ ಅಥವಾ ದೊಡ್ಡವರಿಗೂ ಪ್ಲಾಸ್ಟಿಕ್ ಡಬ್ಬದಲ್ಲಿ ಆಹಾರವನ್ನು ಕಳಿಸಿಕೊಡುವುದನ್ನು ನಿಲ್ಲಿಸಿ. ಪ್ಲಾಸ್ಟಿಕ್ ಬಾಟಲಿ ಯಲ್ಲಿ ನೀರು ಕಳಿಸಿಕೊಡಬೇಡಿ ಹೋಟೆಲಿನಿಂದ ತರುವುದು ಅನಿವಾರ್ಯವಾದಾಗ ಮನೆಯಿಂದ ಸ್ಟೀಲ್ ಡಬ್ಬಿ ತೆಗೆದುಕೊಂಡು ಹೋಗಿ ಪಾರ್ಸೆಲ್ ತನ್ನಿ ಪ್ಲಾಸ್ಟಿಕ್ ಅಲ್ಯೂಮೆನಿಯಂ ಬಳಕೆಯನ್ನು ನಿಲ್ಲಿಸಿ ಆರೋಗ್ಯ ಕಾಪಾಡಿಕೊಳ್ಳಿ…..
ಸ್ವರ್ಣ ಕುಂದಾಪುರ