Home » ನಿಷೇಧಿತ 105 ಕೆ.ಜಿ ಪ್ಲಾಸ್ಟಿಕ್‌ಗಳ ವಶ
 

ನಿಷೇಧಿತ 105 ಕೆ.ಜಿ ಪ್ಲಾಸ್ಟಿಕ್‌ಗಳ ವಶ

by Kundapur Xpress
Spread the love

ಕುಂದಾಪುರ : ಸ್ಥಳೀಯ ಪುರಸಭೆ ವ್ಯಾಪ್ತಿಯ ಅಂಗಡಿಗಳು, ಮಳಿಗೆಗಳು, ಹೋಟೆಲ್‌ಗಳು, ಹೂವಿನ ಮಾರುಕಟ್ಟೆಗೆ ಪುರಸಭೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಸಿಕ್ಕ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಈ ವೇಳೆ ವರ್ತಕರು ಮತ್ತು ಪುರಸಭಾ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸುವ ಮೊದಲು ಅದನ್ನು ತಯಾರಿಸುವ ಕಂಪೆನಿಗಳನ್ನು ಬಂದ್‌ ಮಾಡಲು ಆಗ್ರಹಿಸಿದರು 

ಪುರಸಭೆ ಮುಖ್ಯಾಧಿಕಾರಿ ಆನಂದ ಜಿ. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ವೇಳೆ 105 ಕೆ.ಜಿ.ಗಳಷ್ಟು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಿವಿಧ ಅಂಗಡಿ, ಹೋಟೆಲ್‌ಗಳಿಂದ ವಶಪಡಿಸಿಕೊಳ್ಳಲಾಯಿತು. ಒಟ್ಟು 20,000 ಸಾವಿರ ರೂ. ದಂಡ ವಿಧಿಸಲಾಗಿದೆ.ಕಾರ್ಯಾಚರಣೆಯಲ್ಲಿ ಪುರಸಭೆಯ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ, ಕಂದಾಯ ಅಧಿಕಾರಿ ಅಂಜನಿ ಗೌಡ, ಸಿಬಂದಿ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು

ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ದಂಡ ವಿಧಿಸಿ, ದೂರು ದಾಖಲಿಸುವುದಾಗಿ ಅಧಿಕಾರಿಗಳು ಇದೇ ವೇಳೆ ವರ್ತಕರಿಗೆ ಎಚ್ಚರಿಕೆ ನೀಡಿದ್ದಾರೆ.

   

Related Articles

error: Content is protected !!