ಕೋಟ : ಮಧ್ಯಪ್ರದೇಶದ ಇಂದೋರ್ನಲ್ಲಿ ಜುಲೈ 21ರಿಂದ 26ರವರೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೋಟದ ಜಿ.ವಿ ಅಶೋಕ್ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕ್ಲಾಸಿಕ್ ಸ್ಕಾಂಟ್ಸನ 142.50.ಕೆ.ಜಿ ವಿಭಾಗದಲ್ಲಿ ಕಂಚು, ಡೆಡ್ ಲಿಫ್ಟ್ ನಲ್ಲಿ 135 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕಗಳಿಸಿದ್ದಾರೆ. ಟೋಟಲ್ 402.50 ಕೆ.ಜಿ ಎತ್ತಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಈಕ್ವಿಪ್ಡ್ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಕಾಂಟ್ಸನ 150 ಕೆ.ಜಿ ಭಾರ ಎತ್ತಿ ಚಿನ್ನದ ಪದಕ, ಬೆಂಚ್ ಪ್ರೆಸ್ ನ 103.50 ಕೆ.ಜಿ ಯಲ್ಲಿ ಚಿನ್ನದ ಪದಕ, ಡೆಡ್ ಲಿಫ್ಟ್ ನಲ್ಲಿ 200ಕೆ.ಜಿ ಚಿನ್ನದ ಪದಕ, ಒಟ್ಟಾರೆ 483.50 ಕೆ.ಜಿ ಎತ್ತಿ ಚಿನ್ನದ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಬೆಸ್ಟ್ ಲಿಫ್ಟರ್ ಆಫ್ ಇ.ಮಡಿಯಾ ಎಂ.3 ಈಕ್ವಿಪ್ಡ್ 2024ನ್ನು ತನ್ನದಾಗಿಸಿಕೊಂಡಿದ್ದಾರೆ.