Home » ರೇವಣ್ಣ,ಪ್ರಜ್ವಲ್ ದೇವ್ರು : ಸಂತ್ರಸ್ಥೆ ಅತ್ತೆ
 

ರೇವಣ್ಣ,ಪ್ರಜ್ವಲ್ ದೇವ್ರು : ಸಂತ್ರಸ್ಥೆ ಅತ್ತೆ

by Kundapur Xpress
Spread the love

ಹಾಸನ : ತನ್ನ ಮೇಲೆ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಯ ಅತ್ತೆಯೇ ಇದೀಗ ರೇವಣ್ಣ ಹಾಗೂ ಪ್ರಜ್ವಲ್ ಪರ ನಿಂತಿದ್ದು, ತನ್ನ ಸೊಸೆಯೇ ಸರಿಯಿಲ್ಲ. ರೇವಣ್ಣ, ಪ್ರಜ್ವಲ್ ಹಾಗೂ ಭವಾನಿ ಅಕ್ಕನವರು ದೇವರಿದ್ದಂತೆ ಎಂದು ಹೇಳಿದ್ದಾರೆ.

ಸೋಮವಾರ ಮಾತನಾಡಿದ ಸಂತ್ರಸ್ತ ಮಹಿಳೆಯ ಅತ್ತೆ ಗೌರಮ್ಮ  ‘ಭವಾನಿ ರೇವಣ್ಣ ಅವರ ಮನೆಯಲ್ಲಿ 4 ವರ್ಷ ಸೊಸೆ ಮನೆ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಆಕೆಯನ್ನು ಭವಾನಿ, ರೇವಣ್ಣ ಹಾಗೂ ಪ್ರಜ್ವಲ್ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಕೆಲಸ ಬಿಟ್ಟು ಹೋಗಿದ್ದಾಳೆ. ಅದಾದ ಬಳಿಕ ಇಷ್ಟು ದಿನ ಕಳೆದರೂ ದೂರು ನೀಡದ ಮಹಿಳೆ, ಚುನಾವಣೆ ವೇಳೆ ಯಾರದೋ ಮಾತು ಕೇಳಿಕೊಂಡು ದೇವೇಗೌಡರ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ. ಹಿಂದೆಯೇ ಆರೋಪಿಸಬಹುದಿತ್ತು’ ಎಂದು ದೂರಿದರು.

   

Related Articles

error: Content is protected !!