Home » ರಾಮಲಲಾನ ದರ್ಶನ ಪಡೆದ ರಾಷ್ಟ್ರಪತಿ
 

ರಾಮಲಲಾನ ದರ್ಶನ ಪಡೆದ ರಾಷ್ಟ್ರಪತಿ

by Kundapur Xpress
Spread the love

ಆಯೋಧ್ಯೆ: ಶ್ರೀರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯಾಗಿ ನೂರು ದಿನಗಳ ಬಳಿಕ  ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ ಬಾಲರೂಪವನ್ನು ನೋಡಿದ ದಿವ್ಯ ಅನುಭವವನ್ನು ಪದಗಳಲ್ಲಿ ಹೇಳಲು ನನ್ನಿಂದ ಸಾಧ್ಯವಿಲ್ಲ ಶ್ರೀರಾಮ ಮತ್ತು ದೋಣಿ ನಡೆಸುವ ಅಂಬಿಗ ಕೇವತ್‌ ಸಂಭಾಷಣೆಯಿಂದ ಹಿಡಿದು ಶ್ರೀರಾಮ ಮಾತೆ ಶಬರಿ ನೀಡುವ ಹಣ್ಣು ತಿನ್ನುವವರೆಗಿನ ಘಟನೆಗಳು ಪದೇ ಪದೇ ನೆನಪಾಗುತ್ತಿವೆ. ನಾನು ಭಾವೋದ್ವೇಗದಲ್ಲಿ ಮುಳುಗಿದ್ದೇನೆ ಮುರ್ಮು ಎಂದು ಹೇಳಿಕೊಂಡಿದ್ದಾರೆ

ಈ ರಾಮ ಮಂದಿರವು ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಆದರ್ಶಗಳ ಜೀವಂತ ಸಂಕೇತವಾಗಿದೆ. ಇದು ಎಲ್ಲರ ಕಲ್ಯಾಣಕ್ಕಾಗಿ ಕೆಲಸ ಮಾಡಲು ದೇಶವಾಸಿಗಳನ್ನು ಪ್ರೇರೇಪಿಸುತ್ತದೆ. ಭಾರತೀಯರ ಕಲ್ಯಾಣಕ್ಕಾಗಿ ಶ್ರೀರಾಮನನ್ನು ಪ್ರಾರ್ಥಿಸುವ ಅವಕಾಶ ನನಗೆ ಸಿಕ್ಕಿತು. ಅದನ್ನು ನಾನು ದೈವಿಕ ಆಶೀರ್ವಾದ ಎಂದು ಪರಿಗಣಿಸುತ್ತೇನೆ. ಈ ಅವಧಿ ಯಲ್ಲಿ ನಮ್ಮ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯ ಪಯಣವನ್ನು ವೀಕ್ಷಿಸಲು ಮತ್ತು ಭಾಗವಹಿಸಲು ಇದು ಒಂದು ಸುಯೋಗವಾಗಿದೆ ಎಂದು ಅವರು ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ

ಸ್ವತಃ ಆರತಿ ಮಾಡಿದ ಮುರ್ಮು

ಸರಯೂ ನದಿಯ ತೀರಕ್ಕೆ ತೆರಳಿದ ಮುರ್ಮು ಅಲ್ಲಿ ಸರಯೂ ಆರತಿಯಲ್ಲಿ ಪಾಲ್ಗೊಂಡರು. ಈ ವೇಳೆ ತಾವೂ ಸರಯೂ ನದಿಗೆ ಆರತಿ ಮಾಡಿದರು. ಅಲ್ಲಿಂದ ಮುಂದೆ ಜನ್ಮಭೂಮಿ ಮಂದಿರದಲ್ಲಿ ರಾಮಲಲಾನ ದರ್ಶನಕ್ಕಾಗಿ ಆಗಮಿಸಿದರು. ಅಲ್ಲಿ ಅವರು ಸಂಧ್ಯಾ ಆರತಿಯಲ್ಲಿ ಭಾಗವಹಿಸಿ, ತಾವು ಸ್ವತಃ ರಾಮಲಲಾಗೆ ಆರತಿ ಮಾಡಿದರು

   

Related Articles

error: Content is protected !!