Home » ಪ್ರತಿಪಕ್ಷಕ್ಕೆ ಅಗೌರವ ಆರೋಪ
 

ಪ್ರತಿಪಕ್ಷಕ್ಕೆ ಅಗೌರವ ಆರೋಪ

by Kundapur Xpress
Spread the love

ಪ್ರತಿಪಕ್ಷಕ್ಕೆ ಅಗೌರವ ಆರೋಪ

ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಆಡಳಿತ ಮಾಡುವ ಯಾವುದೇ ಪಕ್ಷ ಇದ್ದರೂ ಪ್ರತಿ ಪಕ್ಷಕ್ಕೆ ಆದ್ಯತೆಯ ಮೇರೆಗೆ ಗೌರವ ಕೊಡಬೇಕಾಗಿದೆ. ಆದರೆ ಪ್ರತಿ ಪಕ್ಷವನ್ನೇ ನಿರ್ಮೂಲನೆ ಮಾಡಬೇಕೆಂದು ಸಾರುವ ಬಿಜೆಪಿ ಪಕ್ಷಕ್ಕೆ ಭಾರತ ದೇಶದ ಸಂವಿಧಾನ ಮತ್ತು ಅದರ ಆಶಯದ ಮೇಲೆ ನಂಬಿಕೆ ಇಲ್ಲದಂತೆ ಕಾಣುತ್ತಿದೆ ಅದರ ನಾಯಕರು ಕೂಡ ಆ ರೀತಿಯಲ್ಲಿ ಹೇಳಿಕೆಯನ್ನು ಕೊಟ್ಟಿರುವುದು ನಾವು ಕಂಡಿದ್ದೇವೆ.

ಇದಕ್ಕೆ ಸಾಕ್ಷಿ ಎಂಬಂತೆ 26.02.2023 ರಂದು ಮಂಗಳೂರು ಕ್ರೀಡಾಂಗಣದ ಪೆವಿಲಿಯನ್ ಮತ್ತು ಸ್ಕಿಲ್ ಡೆವೆಲಪ್‍ಮೆಂಟ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಪ್ರತಿಪಕ್ಷಕ್ಕೆ ಜಿಲ್ಲಾಡಳಿತ ಮತ್ತು ಬಿಜೆಪಿ ಪಕ್ಷ ಆಮಂತ್ರಣ ಪತ್ರಿಕೆ ನೀಡದೆ ನೀಚ ರಾಜಕೀಯ ಮಾಡಿರುತ್ತದೆ.

ನಮ್ಮ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕರು ಹಾಗೂ ಮಾಜಿ ಆರೋಗ್ಯ ಮತ್ತು ನಗರಾಭಿವೃಧ್ಧಿ ಸಚಿವರಾದ ಯು.ಟಿ.ಖಾದರ್‍ರವರಿಗೆ ಹಾಗೂ ಸ್ಥಳಿಯ ಸಂಸ್ಥೆಗಳ ಪ್ರತಿನಿಧಿ ಶಾಸಕರಾದ ಮಂಜುನಾಥ ಭಂಡಾರಿಗಳಿಗೆ ಆಮಂತ್ರಣ ಪತ್ರಿಕೆ ನೀಡದೆ ಅವರ ಗೌರವಕ್ಕೆ ಅವಮಾನ ಮಾಡಲಾಗಿದೆ ಎಂದು ಕೆ.ಪಿ.ಸಿ.ಸಿ ವಕ್ತಾರರಾದ ಎ.ಸಿ.ವಿನಯರಾಜ್‌ ರವರು  ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು

   

Related Articles

error: Content is protected !!