ಕುಂದಾಪುರ : ಕುಂದಾಪುರ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆಯನ್ನು ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪವಿಭಾಗದವರ ಕಚೇರಿಯಲ್ಲಿ ನಡೆಸಲಾಗಿದೆ.ಸಭೆಯಲ್ಲಿ ಶ್ರೀ ಬೆಳ್ಳಿಯಪ್ಪ ಕೆ.ಯು ಉಪಾಧಿಕ್ಷಕರು ಕುಂದಾಪುರ ಉಪವಿಭಾಗ,ನಂಜಪ್ಪ ಎನ್. ಪೊಲೀಸ್ ನಿರೀಕ್ಷಕರು ಕುಂದಾಪುರ ಠಾಣೆ, ವಿನಯ ಕೋರ್ಲಹಳ್ಳಿ, ಪಿ.ಎಸ್.ಐ ಕುಂದಾಪುರ ಠಾಣೆ ಮತ್ತು ಕುಂದಾಪುರ ಸಂಚಾರ ಪೊಲೀಸ್ ಠಾಣಾ ಪಿಎಸ್ಐ ಪ್ರಸಾದ್ ಹಾಜರಿದ್ದರು.ಸಭೆಯಲ್ಲಿ ಕುಂದಾಪುರ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ವಿವಿಧ ಖಾಸಗಿ ಬಸ್ ಗಳ ಮಾಲಕರು/ಮ್ಯಾನೇಜರ್ ಗಳು ಹಾಜರಿದ್ದು,ಅವರುಗಳಿಗೆ ಖಾಸಗಿ ಬಸ್ ಗಳಿಗೆ ಕಡ್ಡಾಯವಾಗಿ ಅಕ್ಟೊಬರ್ ತಿಂಗಳ 31ನೇ ತಾರೀಖಿನ ಒಳಗಾಗಿ ಬಸ್ ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆಯೂ,ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸುವಂತೆ ಮತ್ತು ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸದಂತೆ ಹಾಗೂ ಬಸ್ ಗಳ ಒಳಗೆ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ಮಹಿಳೆಯರು ಮತ್ತು ಮಕ್ಕಳೊಂದಿಗೆ ಬಸ್ಸಿನ ಚಾಲಕ/ಕಂಡೆಕ್ಟರ್ ಗೌರವಯುತವಾಗಿ ನಡೆದುಕೊಳ್ಳುವಂತೆಯೂ ಹಾಗೂ ಇನ್ನಿತರ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೇಲಾಧಿಕಾರಿಯವರು ಸೂಚನೆಗಳನ್ನು ನೀಡಿರುತ್ತಾರೆ.