ಬೈಂದೂರು : ಮೀನುಗಾರಿಕಾ ಇಲಾಖೆಯ ಮೂಲಕ ಬೈಂದೂರು ತಾಲ್ಲೂಕಿನ ಮೀನುಗಾರರಿಗೆ ಮಂಜೂರಾಗಬೇಕಿದ್ದ ಮನೆ ನಿರ್ಮಾಣದ ಆದೇಶ ಪತ್ರ ಇನ್ನೂ ಯಾರೊಬ್ಬರಿಗೂ ದೊರೆಯದ ಹಿನ್ನೆಲೆಯಲ್ಲಿ ಉಪ್ಪುಂದ ಕಾರ್ಯಾಲಯದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ನಿರ್ಧರಿಸಲಾಯಿತು.