ಕೋಟ : ಭತ್ತಕ್ಕೆ ನ್ಯಾಯಯುತವಾದ ಬೆಲೆಯನ್ನು ನಿಗಡಿಪಡಿಸಬೇಕು ಎನ್ನುವ ರೈತರ ಬೇಡಿಕೆಗೆ ಅಕ್ಕಿ ಗಿರಣಿಗಳು ಸ್ಪಂದಿಸದಿರುವುದರಿಂದ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರವನ್ನು ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನವೆಂಬರ್ ಪ್ರಥಮ ವಾರದಲ್ಲಿ ನಿಗದಿತ ದಿನದಂದು ಕೋಟದಲ್ಲಿ ಪ್ರತಿಭಟನೆ ನಡೆಸಲು ಸ್ಥಳೀಯ ರೈತಧ್ವನಿ ಸಂಘಟನೆ ವತಿಯಿಂದ ಅ.23ರಂದು ಕೋಟದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಾಗತಿಕ ಬದಲಾವಣೆಗಳು, ಮಾರುಕಟ್ಟೆ ಮೌಲ್ಯವನ್ನು ಅವಲಂಭಿಸಿ ದರ ನಿಗದಿಯಾಗುತ್ತದೆ ಎನ್ನುವ ಮಿಲ್ ಮಾಲಕರ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ. ಬೆಲೆ ನಿಗದಿಪಡಿಸುವಲ್ಲಿ ಮಿಲ್‍ಗಳ ಪಾತ್ರವೇ ಮುಖ್ಯವಾಗಿದೆ. ಆದರೆ ರೈತರಿಂದ ಕಡಿಮೆ ಬೆಲೆಗೆ ಭತ್ತವನ್ನು ಖರೀದಿ ಅದರ ಎರಡು-ಮೂರು ಪಟ್ಟು ಹೆಚ್ಚು ದರಕ್ಕೆ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ. ಭತ್ತದಿಂದ ಹೊಟ್ಟು,ಬೂದಿ ಮೊದಲಾದ ಬೆಲೆ ಬಾಳುವ ವಸ್ತುಗಳು ಉತ್ಪತ್ತಿಯಾಗುತ್ತದೆ ಎಂದು ರೈತಧ್ವನಿ