118
ಕುಂದಾಪುರ: ಭಾಗಕ್ಕೆ ಇದೊಂದು ಅವಶ್ಯಕತೆ ಇರುವ ಕ್ಲಿನಿಕ್ ವಾಗಿರುವುದರಿಂದ ಮೂಲಕ ಕುಂದಾಪುರ ಜನತೆಗೆ ಒಂದು ಉತ್ತಮ ಸೇವೆ ನೀಡುವಂತಾಗಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರದ ಪುರಸಭಾ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಮುಂಭಾಗದಲ್ಲಿ ನೂತನ ಆರ್.ಕೆ.ಆರ್ಥೋ & ಹ್ಯಾಂಡ್ ಕ್ಲಿನಿಕ್ ಉದ್ಘಾಟಿಸಿ ದೀಪವನ್ನು ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗಿರಿಜಾ ಸರ್ಜಿಕಲ್& ಹೆಲ್ತ್ ಕೇರ್ ರವೀಂದ್ರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು
ಕಾರ್ಯಕ್ರಮದ ವೇದಿಕೆಯಲ್ಲಿ
ಆರ್.ಕೆ.ಆರ್ಥೋ & ಹ್ಯಾಂಡ್ ಕ್ಲಿನಿಕ್ ಮುಖ್ಯಸ್ಥರಾದ ಡಾ||ರಂಜಿತ್ ಕುಮಾರ್ ಅವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಅನೇಕರು ಉಪಸ್ಥಿತರಿದ್ದರು.

