ಕುಂದಾಪುರ : ಕುಂದಾಪುರಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿಯವರನ್ನು ಕ್ರೈಸ್ತ ಮುಖಂಡರ ಆಯೋಗ ಅರ್ ಎನ್ ಶೆಟ್ಟಿ ಸಭಾಂಗಣದ ಬಳಿ ಭೇಟಿ ನೀಡಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡ ಪ್ರತ್ಯೇಕ ವೆಲಂಕಣಿ ಚರ್ಚ್ ಗೆ ಇರುವ ರೈಲನ್ನು ಮತ್ತೆ ಪ್ರಾರಂಭಿಸಲು ಮನವಿಯನ್ನು ಸಲ್ಲಿಸಲಾಯಿತು.
ದೇಶದ ಅತಿ ದೊಡ್ಡ ಕಥೋಲಿಕ್ ಯಾತ್ರಾ ಕೇಂದ್ರವಾಗಿರುವ ಬಸಿಲಿಕ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ ಚರ್ಚ್ , ಕ್ರೈಸ್ತರ ಯಾತ್ರಾತ್ರಿ ಕೇಂದ್ರಯಾಗಿದೆ . ಸೆಪ್ಟೆಂಬರ್ ತಿಂಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ಕರಾವಳಿ ಭಾಗದ ಕ್ರೈಸ್ತರು ಹೆಚ್ಚಾಗಿ ಭಾಗವಹಿಸುತ್ತಾರೆ.ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರತ್ಯೇಕ ರೈಲು ವ್ಯವಸ್ಥೆ ಇದ್ದು ಭಕ್ತಾದಿಗಳಿಗೆ ಭಾಗವಹಿಸಲು ಸಹಕಾರಿಯಾಗಿತ್ತು. ರಸ್ತೆ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಪ್ರತ್ಯೇಕ ರೈಲಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೋಣಿ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಭಂಡಾರಿ, ನಾರಾಯಣ ಆಚಾರಿ ,ಕ್ರೈಸ್ತ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಹೆರಾಲ್ಡ್ ಕೋತ್,ಮೇಬಲ್ ಡಿಸೋಜಾ,
ಹೆರಾಲ್ಡ್ ಡಿಸೋಜಾ, ಜೋಸೆಫ್ ರೆಬೆಲ್ಲೊ, ಸುವರ್ಣ ಅಲ್ಮೇಡಾ, ಪ್ರೀತಮ್ ಕರ್ವಾಲ್ಲೊ, ವೇಲಾ ಬ್ರಗಾಂಜ,ಡೊಲ್ಫಿ ಡಿಕೋಸ್ತಾ, ಸವಿತಾ ಸಿಕ್ವೇರಾ ಇನ್ನಿತರರು ಉಪಸ್ಥಿತರಿದ್ದರು