ಕುಂದಾಪ್ರ : ಹೊಯ್ ಎಂತಾ ಮಳಿ ಮಾರ್ರೇ ಎಲ್ ಕಂಡ್ರೂ ನೀರೇ…. ನಮ್ದ್ ಗೆದ್ದಿ ಕಟ್ ಅಂಚ್ ಎಲ್ಲಾ ಬಳ್ಕಂಡ್ ಹೊಯ್ತ್ ಈ ನಮನೀ ಮಳೀ ಕಾಣ್ದೆ ಕೆಲವ್ ವರ್ಷ್ ಆಯ್ತ್ ಮಾರ್ರೇ ಪಕ್ಕದ್ ಲೀಲಕ್ಕ್‌ನ ಮನಿ ಹಲ್ಸಿನ್ ಮರ ಬಿದ್ದೆ ಹೊಯ್ತ್ ಒಳ್ಳೆ ಬೊಕ್ಕೆ ಬೊಕ್ಕಿ ಹಣ್ಣ್ ಆತಿತ್ ಮಾರ್ರೇ ಈ ಮಳಿಗ್ ನಮ್ ಮನಿ ಜಗ್ಲಿವರೆಗೂ ನೀರ್ ಬಂದಿತ್ ಹೊಯ್ ನಿಮಗೊಂದು ವಿಷಯ ಗೊತ್ತಾ…..ಕೋಡಿ ಬದಿಲೆಲ್ಲಾ ಸಮುದ್ರು ಉಕ್ಕಿ ಮನಿಯೊಳಗ್ ನೀರ್ ಅಂಬ್ರಲೆ ಅಲ್ಲಿ ಬದಿಯರ್ ಕೆಲವರ್ ನೆರ್ಮನಿ ನೇಮಣ್ಣನ್ ಮನಿಗ್ ಬಂದಿರಂಬ್ರಹೌದು ಎಲ್ಲಿ ಕಂಡರೂ ಈಗ ಮಳೆಯದೇ ಮಾತು ಮಳೆಯಿಂದಾಗಿ ಮುಗಿಯದ ಅವಾಂತರಗಳು ಮನೆಗಳ ಗೋಡೆ ಕುಸಿತ ಪಾಗಾರ ಕುಸಿತ ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ನೀರು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಹೊಂಡಮಯವಾದ ರಾಷ್ಟ್ರೀಯ ಹೆದ್ದಾರಿ ಎಲ್ಲಿ ನೋಡಿದರೂ ಸೊಳ್ಳೆಗಳ ಕಾಟ ಅಗಾಗ್ಗೆ ಕೈಕೊಡುವ ಕರೆಂಟ್ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು ಹೀಗೆಯೇ ಧಾರಾಕಾರ ಮಳೆ ಮುಂದುವರಿದರೇ ನೆರೆಭೀತಿಯನ್ನು ಎದುರಿಸಬೇಕಾಗುತ್ತದೆ ಈ ಬಗ್ಗೆ ತಾಲೋಕು ಆಡಳಿತ ಮತ್ತು ಕುಂದಾಪುರ ಪುರಸಭೆಯವರು ತಕ್ಷಣ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ
ಕೆ ಗಣೇಶ್ ಹೆಗ್ಡೆ, ಕುಂದಾಪುರ