Home » ಭವಿಷ್ಯದ ಸಮೃದ್ಧ ಬೆಳೆಗೆ ಇಂತಹ ಶಿಬಿರಗಳು ಪೂರಕವಾಗುತ್ತದೆ
 

ಭವಿಷ್ಯದ ಸಮೃದ್ಧ ಬೆಳೆಗೆ ಇಂತಹ ಶಿಬಿರಗಳು ಪೂರಕವಾಗುತ್ತದೆ

: ಜನಾರ್ಧನ ಹಂದೆ

by Kundapur Xpress
Spread the love

ಕೋಟ : ಸಮಾಜದ ಮಕ್ಕಳು ದೇವರ ಮಕ್ಕಳು. ನಾವು ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ನಿರ್ದೇಶಿಸಬೇಕು. ಕಾಲಿ ಪುಟದ ಹಾಗಿನ ಮಕ್ಕಳ ಮನಸ್ಸಿನಲ್ಲಿ ಧ್ಯೇಯ ದೋರಣೆಗಳ ನೀತಿ ಪಾಠವನ್ನು ಬಿತ್ತಬೇಕು. ಭವಿಷ್ಯದ ಸಮೃದ್ಧ ಬೆಳೆಗೆ ಇಂತಹ ಶಿಬಿರಗಳು ಪೂರಕವಾಗುತ್ತದೆ. ಮೊಬೈಲ್ ಮುಕ್ತ ವಾತಾವರಣದಲ್ಲಿ ಒಂದಷ್ಟು ಕಾಲ ಕಳೆದಾಗ ನಿಜವಾಗಿ ಬಾಲ್ಯ ದೊರೆತಂತಾಗುತ್ತದೆ ಎಂದು ಯಕ್ಷ ಸಂಘಟಕ ಜನಾರ್ದನ ಹಂದೆ ಅಭಿಪ್ರಾಯಪಟ್ಟರು.
ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ‘ರಜಾರಂಗು-24’ 20ನೇ ದಿನದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಏಪ್ರಿಲ್ 30ರಂದು ಶಿಶುಮಂದಿರದ ಸಮೀಪದ ಪ್ರಕೃತಿಯ ಮಡಿಲಲ್ಲಿ ಶಿಬಿರದ ಆವರಣದಲ್ಲಿ ಜನಾರ್ದನ ಹಂದೆಯವರು ಮಾತನ್ನಾಡಿದರು. ಮಾ | ರಾಘವ ಅಭಿನಂದಿಸಿದರು.
ದಾಸರ ಕೀರ್ತನೆಗಳಲ್ಲಿ, ನಾಟಕಗಳಲ್ಲಿ, ಯಕ್ಷಗಾನದಲ್ಲಿ, ಆಟೋಟಗಳಲ್ಲಿ ನೀತಿ ಇರುತ್ತದೆ. ನೀತಿಯನ್ನು ಆದರಿಸಿದ ಕೀರ್ತನೆಗಳು ಹಿಂದಿನ ಕಾಲದಲ್ಲಿ ಸಮಾಜಮುಖಿಯಾಗಿ ಪಸರಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರಚೋದಿಸುತ್ತಿತ್ತು. ಇಂದು ಮಾಧ್ಯಮಗಳ ಕಾರಣದಿಂದ ಎಲ್ಲವೂ ಮೂಲೆಗುಂಪಾಗಿದೆ ಎಂದು ಜನಾರ್ಧನ ಹಂದೆ ಮಕ್ಕಳಿಗೆ ನೀತಿಯನ್ನು ಬೋಧಿಸಿದರು.
ಶಿಬಿರಾರ್ಥಿ ಸೃಷ್ಠಿ ಬೇಳೂರು, ರಂಗ ನಿರ್ದೇಶಕ ರಂಜಿತ್ ಶೆಟ್ಟಿ ಬ್ರಹ್ಮಾವರ, ಉಪಸ್ಥಿತರಿದ್ದರು. ಶಿಬಿರಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದರು.

   

Related Articles

error: Content is protected !!