ಕೋಟ : ಕಲಿಯುವಿಕೆ ನಿರಂತರವಾಗಿರಬೇಕು. ಎಲ್ಲಾ ವಿಷಯದಲ್ಲಿಯೂ ಪರಿಪೂರ್ಣತೆಯನ್ನು ಸಾಧಿಸಬೇಕು. ರಜಾರಂಗು ಆರಂಭದ ದಿನಗಳ ರಜಾರಂಗು ಶಿಬಿರದ ವಿದ್ಯಾರ್ಥಿಯಾಗಿ ಸೇರಿದ ದಿನಗಳು ಅವಿಸ್ಮರಣೀಯ. ಇಂತಹ ಪಠ್ಯೇತರ ಚಟುವಟಿಕೆಗಳು ನನ್ನನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿತ್ತು. ನನ್ನಲ್ಲಿ ಏಕಾಗ್ರತೆ, ಸಾಧಿಸುವ ಛಲಗಳು ಇಂತಹ ಚಟುವಟಿಕೆಗಳಿಂದಲೇ ನೆರವೇರಿತು ಎಂದು ಹಿರಿಯ ಶಿಬಿರಾರ್ಥಿ ಪ್ರಣಮ್ಯ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನ್ನಾಡಿದರು.
ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ‘ರಜಾರಂಗು-24’ 22ನೇ ದಿನದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮೇ 2 ರಂದು ಶಿಶುಮಂದಿರದ ಸಮೀಪದ ಪ್ರಕೃತಿಯ ಮಡಿಲಲ್ಲಿ ಶಿಬಿರದ ಆವರಣದಲ್ಲಿ ಕು| ಪ್ರಣಮ್ಯ ಮಾತನ್ನಾಡಿದರು.
ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ನಿಶಾನಿ ಬೇಳೂರು, ಉಪಸ್ಥಿತರಿದ್ದರು. ಶಿಬಿರಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ‘ರಜಾರಂಗು-24’ 22ನೇ ದಿನದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಿರಿಯ ಶಿಬಿರಾರ್ಥಿ ಪ್ರಣಮ್ಯ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನ್ನಾಡಿದರು. ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ನಿಶಾನಿ ಬೇಳೂರು, ಉಪಸ್ಥಿತರಿದ್ದರು.