Home » ರಜಾರಂಗು-2024
 

ರಜಾರಂಗು-2024

by Kundapur Xpress
Spread the love

ಮನಸ್ಸುಗಳನ್ನು, ಸಾಂಸ್ಕೃತಿಕ ರೂಪಗಳನ್ನು ಒಟ್ಟುಗೂಡಿಸಿ ಹೊಲಿಯುವ ಕಾರ್ಯ ತೆಕ್ಕಟ್ಟೆ ಸಾಂಸ್ಕೃತಿಕ ಕೇಂದ್ರದ್ದಾಗಿದೆ: ಸಾಹಿತಿ ಸುಧಾ ಆಡುಕುಳ
ಕೋಟ: ಸಾಂಸ್ಕೃತಿಕ ಚಟುವಟಿಕೆಗಳು ಜೀವಂತವಾಗಿದ್ದರೆ ಆ ಊರನ್ನು ಹೊರಗಿನವರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸುತ್ತಾರೆ. ತೆಕ್ಕಟ್ಟೆಯ ಸುದ್ಧಿಗಳು ಬಹಳ ಬಹಳವಾಗಿ ಇತ್ತೀಚಿಗೆ ಸಾಂಸ್ಕೃತಿಕ ಸುದ್ಧಿಗಳು ಪತ್ರಿಕೆಗಳು ಬರುತ್ತಿವೆ. ಕಲಾವಿದರ ಬಳಗವೇ ಇಲ್ಲಿಯ ಕೇಂದ್ರಗಳಲ್ಲಿ ಸೃಷ್ಠಿಯಾಗುತ್ತಿದೆ. ಮನಸ್ಸುಗಳನ್ನು ಸಾಂಸ್ಕೃತಿಕ ರೂಪಗಳನ್ನು ಒಟ್ಟು ಗೂಡಿಸಿ ಹೊಲಿಯುವ ಕಾರ್ಯ ತೆಕ್ಕಟ್ಟೆಯ ಸಂಸ್ಥೆಗಳದ್ದಾಗುತ್ತಿದೆ. ಮಕ್ಕಳ ಶಿಬಿರಗಳನ್ನು ನೆರವೇರಿಸುವುದು ಸುಲಭದ ಕೆಲಸವಲ್ಲ. ದಶವಾರ್ಷಿಕವಾದ ಬೆಳೆಗಾಗಿ ನಿರೀಕ್ಷಿಸುತ್ತಿರುವ ಕೆಲಸವಾಗಿದೆ. ಶಿಬಿರದಿಂದ ಮುಂದೊಂದು ದಿನ ಚಿತ್ರಕಾರನಾಗಬೇಕು, ಡಾಕ್ಟರ್ ಆಗಬೇಕು, ಕಲಾವಿದನಾಗಬೇಕು ಎಂದು ನಿರ್ಣಯವನ್ನು ತೆಗೆದುಕೊಳ್ಳುವ ತೀರ್ಮಾನ ಶಿಬಿರದಲ್ಲಿ ಆಗುತ್ತದೆ ಎಂದು ಪ್ರಸಿದ್ಧ ಸಾಹಿತಿ ಸುಧಾ ಆಡುಕುಳ ಶಿಬಿರದ ನಿರ್ದೇಶಕರಾದ ನಾಗೇಶ್ ಕೆದೂರು ಅವರನ್ನು ಅಭಿವಂದಿಸಿ ಮಾತನ್ನಾಡಿದರು.
ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ಮೇ ೭ರಂದು ‘ರಜಾರಂಗು-24ಮಕ್ಕಳ ನಾಟಕೋತ್ಸವದ ಎರಡನೇಯ ದಿನದಲ್ಲಿ ನಾಗೇಶ್ ಕೆದೂರು ಅವರನ್ನು ಅಭಿವಂದಿಸಿ ಆಡುಕುಳ ಮಾತನ್ನಾಡಿದರು.
ಕರಾವಳಿಯ ಸಾಂಸ್ಕೃತಿಕ ಸಿರಿವಂತಿಕೆಗೆ ತೆಕ್ಕಟ್ಟೆಯ ಸಂಸ್ಥೆಗಳ ಕೊಡುಗೆ ದಿನೇ ದಿನೇ ಹೆಚ್ಚಾಗುತ್ತಿದೆ. ರಂಗ ಚಟುವಟಿಕೆಯ ಪೂರ್ವದಲ್ಲಿ ಸಭೆಯ ಮಾತು ಗದ್ದಲವಾಗದಿರುವಂತೆ ಕಾಳಜಿ ವಹಿಸಬೇಕು. ಬೇಸಿಗೆ ಶಿಬಿರದ ಮೂಲಕ ರಂಗಭೂಮಿಯನ್ನೊಳಗೊಳ್ಳುವುದು ನಮ್ಮಲ್ಲಿನ ಮಾನವೀಯ ಗುಣಗಳನ್ನು ಉದ್ದೀಪನಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಉದಯ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.
ಕೈಲಾಸ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊÊಕೂರು, ರಂಗಕರ್ಮಿ ಪುನೀತ್ ಶೆಟ್ಟಿ ಕೋಟ, ವಾರಿಜಾ ಸುಭಾಸ್ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಉಪಸ್ಥಿತರಿದ್ದರು. ರಂಗ ನಿರ್ದೇಶಕರಾದ ಸುಧಾ ಕದ್ರಿಕಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಗಜಾನನ ಶರ್ಮ ರಚನೆಯ ಚೆನ್ನಭೈರಾದೇವಿ ನಾಟಕ ನಾಗೇಶ್ ಕೆದೂರು ನಿರ್ದೇಶನದಲ್ಲಿ ಶಿಬಿರದ ವಿದ್ಯಾರ್ಥಿಗಳಿಂದ ರಂಗ ಸಂಪನ್ನಗೊAಡಿತು.

ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ಮೇ 7ರಂದು ‘ರಜಾರಂಗು-24’ ಮಕ್ಕಳ ನಾಟಕೋತ್ಸವದ ಎರಡನೇಯ ದಿನದಲ್ಲಿ ಶಿಬಿರದ ನಿರ್ದೇಶಕರಾದ ನಾಗೇಶ್ ಕೆದೂರು ಅವರನ್ನು ಅಭಿವಂದಿಸಲಾಯಿತು. ಕೈಲಾಸ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊÊಕೂರು, ರಂಗಕರ್ಮಿ ಪುನೀತ್ ಶೆಟ್ಟಿ ಕೋಟ, ವಾರಿಜಾ ಸುಭಾಸ್ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಉಪಸ್ಥಿತರಿದ್ದರು.

   

Related Articles

error: Content is protected !!