ಕೋಟ : ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ಪ್ರತೀ ವರ್ಷ ಆಚರಿಸುವ ಸಂಸ್ಮರಣಾ ಮತ್ತು ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಭಾನುವಾರ ಸಂಜೆ ಗಂಟೆ 5.00 ಕ್ಕೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯ ಸದಾನಂದ ರಂಗಮAಟಪದಲ್ಲಿ ನಡೆಯಲಿದೆ. ಸದಾನಂದ ಹೆಬ್ಬಾರರ ನೆನಪಿನಲ್ಲಿ ನೀಡಲಾಗುವ ಸದಾನಂದ ಪ್ರಶಸ್ತಿಗಾಗಿ ಈ ವರ್ಷ ನಿಷ್ಠಾವಂತ ಶಿಕ್ಷಕರಾಗಿ, ಜನಾನುರಾಗಿ ಮುಖ್ಯೋಪಾಧ್ಯಯರಾಗಿ, ರಂಗಭೂಮಿಯ ಕಲಾವಿದರಾಗಿ, ಶ್ರೇಷ್ಠ ನಿರ್ದೇಶಕರಾಗಿ, ಸಮರ್ಥ ಸಾಂಸ್ಕçತಿಕ ಸಂಘಟಕರಾಗಿ, ಬ್ರಹ್ಮಾವರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡದ ದಳಪತಿಯಾಗಿ ಸೇವೆ ಸಲ್ಲಿಸುತ್ತಿರುವ ಗುಂಡ್ಮಿ ರಾಮಚಂದ್ರ ಐತಾಳರಿಗೆ ಅವರ ಬಹುಮುಖ ಸೇವೆಯನ್ನು ಗುರುತಿಸಿ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ. 2004ರಿಂದ ಈ ಪ್ರಶಸ್ತಿಯನ್ನು ಸದಾನಂದ ಹೆಬ್ಬಾರರು ಕಾರ್ಯೋನ್ಮುಖರಾಗಿದ್ದಕ್ಷೇತ್ರಗಳಲ್ಲಿಸೇವೆಗೈದಂತಹಮಹನೀಯರಿಗೆ ನೀಡಲಾಗುತ್ತಿದ್ದು ಅನಂತನಾರಾಯಣ ಐತಾಳ, ಕಾಂತಪ್ಪ ಮಾಸ್ತರ್, ಗೋವಿಂದ ಉರಾಳ, ವಿಶ್ವೇಶ್ವರ ಅಡಿಗ, ಮೋಹನ ಆಳ್ವ, ಹರಿಕೃಷ್ಟ ಪುನರೂರ, ಸಕ್ಕಟ್ಟು ಲಕ್ಷಿö್ಮÃನಾರಾಯಣಯ್ಯ, ರಾಘವ ನಂಬಿಯಾರ್, ಮಾರಣಕಟ್ಟೆ, ಕೃಷ್ಠಮೂರ್ತಿ ಮಂಜ, ಸಿದ್ದಾಪುರ ಎಮ್.ಎ.ಹೆಗಡೆ, ಮಣೂರು ನರಸಿಂಹ ಮಧ್ಯಸ್ಥ, ಡಾ| ನಾ.ಮೊಗಸಾಲೆ, ಕಂಬದಕೊಣೆ ಪ್ರಕಾಶ ರಾವ್, ಡಾ|ಟಿ.ಶ್ಯಾಮ ಭಟ್, ಜನಾರ್ಧನ ಮರವಂತೆ, ಪ್ರಾಚಾರ್ಯ ಸದಾನಂದ ಐತಾ¼, ಪ್ರಭಾಕರ ಜೋಷಿ, ಮುರಳಿ ಕಡೆಕಾರ್, ಹರಿಕೃಷ್ಣ ಹೊಳ್ಳರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.