Home » ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
 

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

A C F ಪಿ.ಶ್ರೀಧರ್‌

by Kundapur Xpress
Spread the love

ಕುಂದಾಪುರ : ಹಬ್ಬ ಹರಿದಿನಗಳು ಮತ್ತು ಅಭಿವೃದ್ಧಿಯ ನೆಪದಲ್ಲಿ ಪರಿಸರ ಹಾಳಾಗುತ್ತಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಮನೆ ಮನೆಯಲ್ಲೂ ಮಕ್ಕಳ ಹುಟುಹಬ್ಬ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಗಿಡ ಮರಗಳನ್ನು ನೆಡುವುದರ ಮೂಲಕ ಪ್ರಕೃತಿಯನ್ನು ಸಂರಕ್ಷಿಸಬೇಕು ಶುದ್ಧ ನೀರು ಶುದ್ಧ ಗಾಳಿ ಹಾಗೂ ಬೆಳಕಿಗಾಗಿ ಪ್ರಕೃತಿಯು ನಮಗೆ ಹಾಗೂ ಮುಂದಿನ ಪೀಳಿಗೆಯವರಿಗೆ ಅನಿವಾರ್ಯವಾಗಿದ್ದು ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕೆಂದು ಮಂಗಳೂರು ಸಬ್‌ ಡಿವಿಜನ್‌ ನ A C F ಪಿ.ಶ್ರೀಧರ್ ನುಡಿದರು

ಅವರು ನಗರದ ರಾಮಕ್ಷತ್ರಿಯ ಯುವಕ ಮಂಡಳಿಯ 58 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಮಾತನಾಡಿದರು ಇನ್ನೋರ್ವ ಅತಿಥಿ ರವೀಂದ್ರ ಉಳ್ಳೂರು ಮಾತನಾಡಿ ನಮ್ಮ ಜೀವನ ಕ್ರಮವೇ ಸನಾತನ ಧರ್ಮವಾಗಿದ್ದು 58 ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿರುವ ಯುವಕ ಮಂಡಳಿಯು 100 ನೇ ವರ್ಷಕ್ಕೆ ದಾಪುಗಾಲಿಡಲಿ ಎಂದು ಹಾರೈಸಿದರು

ಸಮಾರಂಭದ ಸಭಾಧ್ಯಕ್ಷತೆಯನ್ನು ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ.ಕೆ. ಪ್ರಭಾಕರ್ ರವರು ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ವರುಣ್‌ ಕುಮಾರ್‌ ಕೆ ಆಗಮಿಸಿದ್ದರು  ವೇದಿಕೆಯಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್‌ ಬೆಟ್ಟಿನ್‌ ಗೌರವಾಧ್ಯಕ್ಷರಾದ ಶ್ರೀನಿವಾಸ್‌ ಇಂಜೀನಿಯರ್‌ ಖಜಾಂಚಿ ನಾಗರಾಜ್‌ ದಫೇದಾರ ನಿಯೋಜಿತ ಅಧ್ಯಕ್ಷ ಪ್ರಭಾಕರ ನೇರಂಬಳ್ಳಿ ಕಾರ್ಯದರ್ಶಿ ಕೆ ಬಿ ವಿಷ್ಣು ಮಹಿಳಾ ಮಂಡಳಿಯ ಅಧ್ಯಕ್ಷೆ ವಿದ್ಯಾಲಕ್ಷೀ ವಿಶ್ವನಾಥ್‌ ಉಪಸ್ಥಿತರಿದ್ದರು ಗಣೇಶೋತ್ಸವದ ನಿಮಿತ್ತ ಎರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ರತ್ನಾಕರ ಮಕ್ಕಿಮನೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಮಹೇಶ್‌ ಬೆಟ್ಟಿನ್‌ ಸ್ವಾಗತಿಸಿ ವಿಷ್ಣು ಕೆ ಬಿ ವಂದಿಸಿದರು

   

Related Articles

error: Content is protected !!