ಕೋಟ : ಸಹಕಾರಿ ಕ್ಷೇತ್ರದಲ್ಲಿ ರಾಮಾಂಜನೇಯ ಸಹಕಾರಿ ಸಂಘ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ್ ಎಸ್.ಕೆ ಹೇಳಿದರು.
ಶನಿವಾರ ಕೋಡಿ ರಾಮಾಂಜನೇಯ ವಿವಿದ್ದೋದೇಶ ಸಹಕಾರಿ ಸಂಘ ಕೋಡಿ ಕನ್ಯಾಣ ಇವರ ವತಿಯಿಂದ ಬಡ ಕುಟುಂಬವಾದ ಭವಾನಿ ಜಿ.ನಾಯಕ್ ಇವರಿಗೆ ಹೊಸ ಸೂರು ಕಲ್ಪಿಸಿದ್ದು ಅದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗ ಸ್ಥಾಪಿಸಿ ಬಡವರ ಕಣ್ಣಿರೊರೆಸುವ ಕಾಯಕ ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ.ಸಹಕಾರಿ ರಂಗ ವ್ಯವಹಾರಕ್ಕೆ ಸಿಮಿತಗೊಳ್ಳದೆ ಅಶಕ್ತರಿಗೆ ಮಿಡಿಯುತ್ತಿದೆ ಎಂದರೆ ಈ ಕ್ಷೇತ್ರ ಬದಲಾವಣೆಯ ಪರ್ವವನ್ನು ಕಾಣುತ್ತಿದೆ ಎಂದರ್ಥ ಎಂದರಲ್ಲದೆ.
ಸಹಕಾರಿ ರಂಗ ಸಮತಾವಾದ ಚಿಂತನೆಯೊಂದಿಗೆ ಗ್ರಾಮೀಣ ಜನಸಾಮಾನ್ಯರ ಭವಣೆಯನ್ನು ನೀಗುತ್ತಿದೆ.ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಗೃಹ ನಿರ್ಮಾಣಕ್ಕೆ ಸಹಕರಿಸಿದ ಪಂಚಾಯತ್ ಸದಸ್ಯ ಅಂತೋನಿ ಡಿಸೋಜ ಇವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಅಧ್ಯಕ್ಷ ಶಂಭು ಪೂಜಾರಿ ವಹಿಸಿದ್ದರು.ಇದೇ ವೇಳೆ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಉಪಾಧ್ಯಕ್ಷ ಮಹಾಬಲ ಕುಂದರ ಮತ್ತು ನಿರ್ದೇಶಕರು,ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಅಂಪಾರು ಜಗನಾಥ ಶೆಟ್ಟಿಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್,ಧಾರ್ಮಿಕ ಮುಖಂಡ ಮಾಧವ ಉಪಾಧ್ಯಾ, ಕೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಕಾರ್ವಿ,ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ ಪ್ರಭಾಕರ್ ಮೆಂಡನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಸದಸ್ಯ ಕೃಷ್ಣ ಪೂಜಾರಿ.ಪಿ,ಕಾಮಾಕ್ಷಿ ಸೌಹಾರ್ದ ಸಹಕಾರಿ ಸಂಘ ಬೈಂದೂರು ಸಿ ಇ ಒ ಶ್ರೀನಿವಾಸ,ಭಾರತ್ ವಿಕಾಸ್ ಸೌಹಾರ್ದ ಸಹಕಾರಿ ಸಿ ಇಒ ರಾಜು, ಕಾಮಧೇನು ಸಹಕಾರಿ ಸಂಘ ಹಂದಟ್ಟು ಸಿಇಒ ಸತೀಶ್ ನಾಯ್ಕ್,ಅಗ್ರಜ ಸೌಹಾರ್ದ ಸಹಕಾರಿ ಸಂಘದ ಸಿ ಇಒ ಗಣೇಶ್ ಕೋಟ್ಯಾನ್,ಪಂಚಗಂಗಾವಳಿ ಸೌಹಾರ್ದ ಸಹಕಾರಿ ಸಂಘ ಗಂಗೊಳ್ಳಿ ಸಿ ಇಒ ಸುಬ್ರಹ್ಮಣ್ಯ, ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಉಪ್ಪುಂದ ಇದರ ಸಿಇಒ ಸುಧಾಕರ್,ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಸಾಸ್ತಾನ,ಸಿಇಒ ಸುದರ್ಶನ್,ಸಾರಸ್ಚತ ಸೌಹಾರ್ದ ಸಹಕಾರಿ ಸಂಘ ಮಣಿಪಾಲ ಸಿಇಒ ಭುವನೇಶ್ ಪ್ರಭು ,ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಸಿಇಒ ಲೋಹಿತ್ ಸಾಲಿಯಾನ್,ಆತ್ಮಿಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಘುರಾಮ ಮರಕಾಲ,ಕೋಡಿ ಮೀನುಗಾರ ಸಹಕಾರಿ ಸಂಘದ ನಿರ್ದೇಶಕರುಗಳು,ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರು ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ನಿರೂಪಿಸಿ ವಂದಿಸಿದರು.