Home » ಜೂನಿಯರ್ ರೆಡ್‍ಕ್ರಾಸ್ ಉದ್ಘಾಟನೆ
 

ಜೂನಿಯರ್ ರೆಡ್‍ಕ್ರಾಸ್ ಉದ್ಘಾಟನೆ

by Kundapur Xpress
Spread the love

ಕುಂದಾಪುರ :  “ಎಲ್ಲ ಜಾತಿ ಧರ್ಮ ಮತಗಳನ್ನು ಮೀರಿದ್ದು ಮಾನವೀಯತೆ. ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಸಂವೇದನಶೀಲ ಗುಣಗಳನ ಮೌಲ್ಯವರ್ಧನೆ ಎಳೆವೆಯಲ್ಲಿಯೇ ಆದಾಗ ಮುಂದೊಂದು ದಿನ ಮಾನವೀಯ ಸಂವೇದನಾಶೀಲ ಸಮಾಜದ ಸೃಷ್ಟಿ ಸಾಧ್ಯ. ಜೂನಿಯರ್ ರೆಡ್‍ಕ್ರಾಸ್‍ನಂತಹ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿ ಬೆಳಗಿಸಲು ಪ್ರೇರಕವಾಗುತ್ತದೆ” ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇವರು ರಾಮ್ಸನ್ ಸರಕಾರಿ ಪ್ರೌಢಶಾಲೆ, ಕಂಡ್ಲೂರು ಇಲ್ಲಿ ಜೂನಿಯರ್ ರೆಡ್‍ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಸುರೇಶ್ ಭಟ್ ಎಸ್., ಮುಖ್ಯೋಪಾಧ್ಯಾಯರು ಇವರ ಅಧ್ಯಕ್ಷತೆಯಲ್ಲಿ ಜೂನಿಯರ್ ರೆಡ್‍ಕ್ರಾಸ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಜೂನಿಯರ್ ರೆಡ್‍ಕ್ರಾಸ್ ಘಟಕದ ಅಧ್ಯಕ್ಷರಾಗಿ 10ನೇ ತರಗತಿಯ ಕುಮಾರಿ ಸ್ವಾತಿ, ಕಾರ್ಯದರ್ಶಿಯಾಗಿ 9ನೇ ತರಗತಿಯ ಸಮರ್ಥ ಇವರು ಆಯ್ಕೆಯಾದರು. ಶ್ರೀ ಜಯಕರ ಶೆಟ್ಟಿ ಇವರು ಲಾಂಚನ ತೊಡಿಸುವುದರ ಮೂಲಕ ಪದಪ್ರಧಾನ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜೂನಿಯರ್ ರೆಡ್‍ಕ್ರಾಸ್ ಕುಂದಾಪುರ ಇದರ ಸಂಯೋಜಕರಾದ ಶ್ರೀ ದಿನಕರ ಆರ್. ಶೆಟ್ಟಿ ಇವರು ಪ್ರತಿಜ್ಞಾವಿಧಿ ಬೋಧಿಸಿ, ರೆಡ್‍ಕ್ರಾಸ್‍ನ ಮಹತ್ವ, ಉದ್ದೇಶ ಹಾಗೂ ಕರ್ತವ್ಯಗಳನ್ನು ವಿವರಿಸಿದರು. ರೆಡ್‍ಕ್ರಾಸ್ ವತಿಯಿಂದ ಕೊಡುಗೆಯಾಗಿ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಹೆಣ್ಣು ಮಕ್ಕಳಿಗೆ ಶುಚಿ ಪ್ಯಾಡ್‍ನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶ್ರೀ ಗೋಪಾಲ್ ವಿಷ್ಣು ಭಟ್, ಶಿಕ್ಷಕರಾದ ಅಣ್ಣಪ್ಪ ಎಂ. ಗೌಡ, ಶ್ರೀಮತಿ ರತ್ನಾ, ಕುಮಾರಿ ದಿಶಾ, ಶ್ರೀಮತಿ ವೈಶಾಲಿ ಭಾಗವಹಿಸಿದ್ದರು. ಶ್ರೀಮತಿ ರಜನಿ ಎಸ್. ಹೆಗಡೆ ಸ್ವಾಗತಿಸಿ, ಜೂನಿಯರ್ ರೆಡ್‍ಕ್ರಾಸ್‍ನ ಸಂಯೋಜಕ ಶಿಕ್ಷಕ ಸಂತೋμï ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ರತ್ನ ಇವರು ವಂದಿಸಿದರು.

   

Related Articles

error: Content is protected !!