ಮುದ್ರಾಡಿ : ನಮ ತುಳುವೇರ್ ಕಲಾ ಸಂಘಟನೆ (ರಿ) ನಾಟ್ಕದೂರು ಮುದ್ರಾಡಿ ಇವರ ಆಶ್ರಯದಲ್ಲಿ ಸುವರ್ಣ ಕರ್ನಾಟಕ ರಂಗೋತ್ಸವ 50 ದಿನಗಳ ಇಂದಿನಿಂದ ನವೆಂಬರ್ 15ರವರೆಗೆ ಜರುಗಲಿದೆ
ಮುದ್ರಾಡಿಯ ಬಿ ವಿ ಕಾರಂತ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 7:00ಗೆ ನಾಟಕ ಯಕ್ಷಗಾನ ತಾಳಮದ್ದಲೆ ಮುಂತಾದ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ ಅಮೃತ ಭಾರತಿ ಟ್ರಸ್ಟ್ ಹೆಬ್ರಿ ಎಸ್ ಆರ್ ಗ್ರೂಪ್ ಆಫ್ ಎಜುಕೇಶನ್ ಟ್ರಸ್ಟ್ ಹೆಬ್ರಿ ಇವರ ಸಹಕಾರದಲ್ಲಿ ಜರುಗಲಿದೆ
ಇಂದು ಶುಕ್ರವಾರ ಸಂಜೆ 6:30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ ಇದರ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಸಮಾರಂಭದ ಅಧ್ಯಕ್ಷತೆಯನ್ನು ಸುಕುಮಾರ್ ಮೋಹನ್ ಅವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಆನಂದ್ ಕುಂದರ್ ಗೀತಾನಂದ ಫೌಂಡೇಶನ್ ಕೋಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕ್ರತರಾದ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಮಲಶಿಲೆಯ ಧರ್ಮದರ್ಶಿಗಳಾದ ಶೆಟ್ಟಿಪಾಲು ಸದಾನಂದ ಚಾತ್ರ ಮತ್ತು ಕರ್ನಾಟಕ ಅಕಾಡೆಮಿಯ ಸಮನ್ವಯ ಸದಸ್ಯರಾದ ಜಗದೀಶ್ ಜಾಲ ಇವರು ಭಾಗವಹಿಸಲಿದ್ದಾರೆ ಸಂಜೆ 7:30ಕ್ಕೆ ಬೇಲೂರು ರಘನಂದನ್ ಇವರ ನಿರ್ದೇಶನದಲ್ಲಿ ಶೋಭಾ ಪ್ರಭು ರಚಿಸಿದ ಆದಿಶಕ್ತಿ ನಾಟಕವು ಕಾಜಾಣ ತಂಡದಿಂದ ಪ್ರದರ್ಶನಗೊಳ್ಳಲಿದೆ
ಸಾರ್ವಜನಿಕರಿಗೆ ಸನ್ಮಾನ ಹಾಗೂ ನಗದು ಪ್ರೋತ್ಸಾಹ ಧನ
50 ದಿನಗಳ ಕಾಲ ನಡೆಯುವ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರಾರಂಭದ ದಿನದಿಂದ ಹಿಡಿದು 50ನೇ ದಿನದವರೆಗೆ ಭಾಗವಹಿಸಿ 50 ದಿನದ ಹಾಜರಾತಿಯನ್ನು ಪರಿಗಣಿಸಿ ಅಂತಹ ಪ್ರೇಕ್ಷಕರಿಗೆ 5,000 ನಗದು ಪ್ರೋತ್ಸಾಹ ಧನದೊಂದಿಗೆ 50ನೇ ದಿನದ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಸುಕುಮಾರ್ ಮೋಹನ್ ಅವರು ತಿಳಿಸಿದ್ದಾರೆ