Home » ಇಂದು ಜಗತ್ತಿನ ದೃಷ್ಟಿಕೋನ ಭಾರತದತ್ತ
 

ಇಂದು ಜಗತ್ತಿನ ದೃಷ್ಟಿಕೋನ ಭಾರತದತ್ತ

ಎಚ್‌ ಎನ್‌ ಚಂದ್ರಶೇಖರ್‌

by Kundapur Xpress
Spread the love

ಕುಂದಾಪುರ :ಇಂದು ಇಡೀ ಜಗತ್ತು ಭಾರತದತ್ತ ನೋಡಲು ಕೇವಲ ದೇಶದಲ್ಲಿ ವೇಗವಾಗಿ ಬೆಳೆಯುವ ಆರ್ಥಿಕತೆ ಅಥವಾ ವಿಜ್ಙಾನದ ಬೆಳವಣಿಗೆ ಮಾತ್ರವಲ್ಲ ದೇಶದಲ್ಲಿ ಗುಪ್ತಗಾಮಿನಿಯಾಗಿ ಕೆಲಸ ಮಾಡಿದ ಹಿಂದು ಧರ್ಮದ ಪುನಶ್ಚೇತನ ಮತ್ತು ಇಂದಿನ ಕಾಲಘಟ್ಟದಲ್ಲಿ ಹಿಂದುಗಳ ಬದಲಾದ ಮನಸ್ಥಿತಿಯಿಂದ ಎಂದು ಧರ್ಮಸ್ಥಳ ರೈತ ಸೇವಾ ಕೇಂದ್ರದ ಮುಖ್ಯಸ್ಥರಾದ ಎಚ್‌ ಎನ್‌ ಚಂದ್ರಶೇಖರ್‌ ನುಡಿದರು

ಅವರು ನಗರದ ಚಿಕ್ಕಮ್ಮನ ಸಾಲು ರಸ್ತೆಯ ರಾಣುಮಕ್ಕಿ ರಿಕಾರ್ಡ್‌ ನಾಗ ಬೊಬ್ಬರ್ಯ ಬನದ 25ನೇ ವರ್ಷದ ರಜತ ಮಹೋತ್ಸವ ವಾರ್ಷೀಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಹಿಂದು ಧರ್ಮದ ಸತ್ವಗಳ ಮೇಲೆ ಜಗತ್ತಿನಲ್ಲಿ ಶಾಂತಿ ಸುಭಿಕ್ಷೆ ನೆಲೆಸಲು ಸಾಧ್ಯ ಎಂದ ಅವರು ಭಾರತ ವಿಶ್ವ ಗುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು

ಸಮಾರಂಭದ ಅಧ್ಯಕ್ಷತೆಯನ್ನು ರಾಣುಮಕ್ಕಿ ಶ್ರೀ ನಾಗಗೊಬ್ಬರ್ಯ ಬನದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕಾಶೀನಾಥ್ ಕೆ ಆರ್‌ ವಹಿಸಿದ್ದರು ವೇದಿಕೆಯಲ್ಲಿ ರವೀಂದ್ರ ಗಂಗೊಳ್ಳಿ ರಿಪ್ಪನಪೇಟೆ ಉಪ ನಿರೀಕ್ಷಕರಾದ ಪ್ರವೀಣ್‌ ಕುಮಾರ್‌ ಎಸ್‌ ಪಿ ಗೌರವಾಧ್ಯಕ್ಷರಾದ ಕೆ ನಾಗರಾಜ್‌ ಕಾರ್ಯದರ್ಶಿ ಮಧುಕರ್‌ ಖಜಾಂಚಿ ನಾಗರಾಜ್‌ ನ್ಯಾಕ್‌ ಉಪಸ್ಥಿತರಿದ್ದು ಹಿರಿಯ ಸದಸ್ಯರಾದ ಕೆ ಆರ್‌ ಉಮೇಶ್‌ ರಾವ್‌ ಮಾತನಾಡಿ ಸಮಿತಿಗೆ ಪ್ರೋತ್ಸಾಹದ ಭರವಸೆಯನ್ನು ನೀಡಿದರು

ಇದೇ ಸಂದರ್ಭದಲ್ಲಿ ಟೆನ್ನಿಕೊಯ್ಟ್‌ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕುಮಾರಿ ಪೂರ್ವಿ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ನಿರ್ಮಿತಿ ನಾಗರಾಜ್‌ ದಫೇದಾರ್‌ ರವರನ್ನು ಸನ್ಮಾನಿಸಲಾಯಿತು  ಡಿ ಸತೀಶ್‌ ಹಾಗೂ ಡಿ ಕೆ ಪ್ರಭಾಕರ್‌ ನಿರೂಪಿಸಿದ ಕಾರ್ಯಕ್ರಮದಲ್ಲಿ ವರದರಾಜ್‌ ಪೈ ಸನ್ಮಾನ ಪತ್ರ ಓದಿದರು ಕೆ ಆರ್‌ ಕಾಶೀನಾಥ್‌ ಸ್ವಾಗತಿಸಿ ರವೀಂದ್ರ ಗಂಗೊಳ್ಳಿ ಶುಭಾಸಂಶನೆಗೈದು ನಾಗರಾಜ್‌ ನ್ಯಾಕ್‌ ಧನ್ಯವಾದವಿತ್ತರು

   

Related Articles

error: Content is protected !!