Home » “ಅಭಿರುಚಿಯಲ್ಲಿ ರಾಜಿಯಾಗದೆ ಇದ್ದರೆ ಯಶಸ್ಸು ಖಂಡಿತಾ” – ರವಿ ಬಸ್ರೂರು
 

“ಅಭಿರುಚಿಯಲ್ಲಿ ರಾಜಿಯಾಗದೆ ಇದ್ದರೆ ಯಶಸ್ಸು ಖಂಡಿತಾ” – ರವಿ ಬಸ್ರೂರು

by Kundapur Xpress
Spread the love

ನಮ್ಮನ್ನು ತೆಗಳುವವರು, ತಿರಸ್ಕರಿಸುವವರನ್ನು ಮತ್ತು ತಪ್ಪು ಹುಡುಕುವವರನ್ನು ದೂರ ಇಡದೆ ಜೊತೆಯಲ್ಲೇ ಇರಿಸಿಕೊಂಡರೆ ನಮ್ಮ ಹೋರಾಟಕ್ಕೆ ಅವರೇ ಸ್ಪೂರ್ತಿಯಾಗುತ್ತಾರೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಇದರ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಕೆಲಸ ಅಥವಾ ಗುರಿ ತಲುಪಿದ ನಂತರ ಸಿಗುವ ಖುಷಿಗಿಂತ ಆ ಗುರಿ ಸಾಧನೆ ಮಾಡುವ ನೆಪದಲ್ಲಿ ಪಡುವ ಪರಿಶ್ರಮ ಇದೆಯಲ್ಲ ಆ ಅನುಭವವೇ ಮನಸ್ಸಿಗೆ ಖುಷಿ ಕೊಡುತ್ತದೆ ಮತ್ತು ಅದು ಜೀವನಕ್ಕೂ ಪಾಠವಾಗುತ್ತದೆ ಎಂದು ಹೇಳುತ್ತಾ ಸಂತೋಷದಿಂದ ಇನಿದನಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದೇನೆ.

ಕಲಾಸೇವೆ ಮಾಡುತ್ತಿರುವ ಕಲಾಕ್ಷೇತ್ರದ ಸದಸ್ಯರು ಬಿಡುವಿಲ್ಲದಂತೆ ಕೆಲಸ ಮಾಡುತ್ತೀರಿ, ಎಷ್ಟು ಬಿಡುವಿರಬಾರದೆಂದರೆ, ಇನ್ನೊಬ್ಬರ ಬಗ್ಗೆ ಮಾತನಾಡುವಷ್ಟು ಸಮಯವೂ ತಮಗೆ ಸಿಗುವಂತಿರಬಾರದು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ದಾಮೋದರ ಪೈ, ಕೆ. ಆರ್. ನಾಯಕ್, ಡಾ. ರಾಜರಾಮ್ ಶೆಟ್ಟಿ, ಸನತ್ ಕುಮಾರ್ ರೈ, ಕುಮಾರ್ ಕಾಂಚನ್, ರಾಜೇಶ್ ಕಾವೇರಿ, ಕಲಾವಿದ ಭಾಸ್ಕರ ಆಚಾರ್ಯ, ಗೋಪಾಲ ವಿ, ಶ್ರೀಧರ ಸುವರ್ಣ, ಡಾ. ಹರಿಪ್ರಸಾದ್ ಶೆಟ್ಟಿ, ಪ್ರಕಾಶ್ಚಂದ್ರ ಹೆಗ್ಡೆ, ಬಿ.ಎನ್. ರಾಮಚಂದ್ರ, ಮೋಹನ್ ಸಾರಂಗ್, ಸಾಯಿನಾಥ ಶೇಟ್, ಶೇಖರ ಖಾರ್ವಿ, ಶ್ರೀಪತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

   

Related Articles

error: Content is protected !!