Home » ಆಮಂತ್ರಣ ಪತ್ರಿಕೆ ಬಿಡುಗಡೆ
 

ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕೊರಗಜ್ಜ ಪರಿವಾರ ದೇಗುಲ

by Kundapur Xpress
Spread the love

ಕೋಟ : ಹಣದಿಂದಲೇ ಯಾವ ಧಾರ್ಮಿಕ ಕ್ಷೇತ್ರಗಳನ್ನು ಅಳೆಯಲು ಸಾಧ್ಯವಿಲ್ಲ ಬದಲಾಗಿ ಶ್ರದ್ಧೆಯಿಂದ ಕೂಡಿದ ಭಕ್ತಿಯೇ ಧಾರ್ಮಿಕ ಕ್ಷೇತ್ರವನ್ನು ಬಹು ಎತ್ತರ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ ಎಂದು ಪಾಂಡೇಶ್ವರದ ಯೋಗ ಗುರುಕುಲದ ನಿರ್ದೇಶಕ ವಿದ್ವಾನ್ ಡಾ.ವಿಜಯ್ ಮಂಜರ್ ನುಡಿದರು.
ಪಾಂಡೇಶ್ವರ ಮೂಡಹಡು ಶ್ರೀ ಕಳಿಬೈಲು ತುಳಿಸಿ ಅಮ್ಮ ಶ್ರೀ ಕೊರಗಜ್ಜ ಪರಿವಾರ ದೇಗುಲದ ವಾರ್ಷಿಕ ನೇಮೋತ್ಸವ,ಗೆಂಡೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಅಹಂಕಾರ ಸಹಜ ಆದರೆ ದುರಹಂಕಾರದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಪ್ರತಿಯೊರ್ವ ಮನಜನಲ್ಲಿ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನೆಡಬೇಕು,ಭಗವಂತ ಏನನ್ನು ಬಯಸುವುದಿಲ್ಲ ಅವನು ಬಯಸುವುದಿದ್ದರೆ ಅದು ಶ್ರದ್ಧೆಯಿಂದ ಕೂಡಿದ ಭಕ್ತಿ ಮಾತ್ರ ಆ ಮೂಲಕವೇ ಧಾರ್ಮಿಕ ಕ್ಷೇತ್ರಗಳು ಪ್ರಗತಿ ಹೊಂದುತ್ತದೆ,ಇಲ್ಲಿನ ಕಳಿಬೈಲು ಸಾನಿಧ್ಯ ಕೂಡಾ ಶಕ್ತಿಕೇಂದ್ರವಾಗಿ ಮೂಡಿಬಂದಿದೆ ಕಾಲಕಾಲಕ್ಕೆ ಅವತಾರ ತಾಳುವ ದೈವ ದೇವರುಗಳು ಭಕ್ತರ ಇಷ್ಟಾರ್ಥಗಳನ್ನು ನೆರವೆರಿಸುತ್ತವೆ,ಕಟ್ಟು ಕಟ್ಟಲೆ ಸೇರಿದಂತೆ ವಿವಿಧ ಉತ್ಸವಾಧಿ ಸೇವೆಗಳು ಕ್ಷೇತ್ರದ ಬಲವನ್ನು ವೃದ್ಧಿಸುತ್ತದೆ,ಈ ಜಗತ್ತಿಗೆ ಭಗವಂತ ಎಲ್ಲವನ್ನು ನೀಡಿದ್ದಾನೆ ಅವನಿಗೆ ಭಕ್ತಿರೂಪದಲ್ಲಿ ನೀಡಬೇಕಾಗಿದೆ ಎಂದರು. ಅಧ್ಯಕ್ಷತೆಯನ್ನು ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಂಸ್ಕೃತಿಕ ಚಿಂತಕ ಅಲ್ವಿನ್ ಅಂದ್ರಾದೆ,ನಿವೃತ್ತ ಬ್ಯಾಂಕ್ ಅಧಿಕಾರಿ ಪಂಜು ಪೂಜಾರಿ,ಬಿಲ್ಲವ ಯುವ ಸಂಘ ಪಾಂಡೇಶ್ವರ ಅಧ್ಯಕ್ಷ ರವಿಕಿರಣ್ ಪೂಜಾರಿ,ಬಾಂಧವ್ಯ ಕರ್ನಾಟಕ ಇದರ ಮುಖ್ಯಸ್ಥ ದಿನೇಶ್ ಬಾಂಧವ್ಯ,ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಶೆಟ್ಟಿ, ಉದ್ಯಮಿ ಕೃಷ್ಣಯ್ಯ ಶೆಟ್ಟಿ, ಮಹಿಳಾಮಂಡಲ ಪಾಂಡೇಶ್ವರ ಇದರ ಲೀಲಾವತಿ ಗಂಗಾಧರ,ಮೂಡಹಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ್ ಆಚಾರ್,ಮೊಗವೀರ ಮುಖಂಡ ರವೀಶ್ ಶ್ರೀಯಾನ್, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಅಕ್ಷಯ ಇದ್ದರು.ಶ್ರೀಶ ಆಚಾತ್ ಸ್ವಾಗತಿದರೆ,ಸುರೇಶ್ ಕಾರ್ಕಡ ಪ್ರಾರ್ಥಿಸಿ,ಕಾರ್ಯಕ್ರಮವನ್ನು ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ನಿರೂಪಿಸಿ ವಂದಿಸಿದರು.ದಿನೇಶ್ ಪಾಂಡೇಶ್ವರ ಸಹಕರಿಸಿದರು.

   

Related Articles

error: Content is protected !!