Home » ಶುಭದಾ ಆಂಗ್ಲ ಮಾಧ್ಯಮ ಶಾಲೆ : 76ರ ಗಣರಾಜ್ಯೋತ್ಸವದ ಸಂಭ್ರಮ
 

ಶುಭದಾ ಆಂಗ್ಲ ಮಾಧ್ಯಮ ಶಾಲೆ : 76ರ ಗಣರಾಜ್ಯೋತ್ಸವದ ಸಂಭ್ರಮ

by Kundapur Xpress
Spread the love

ಕಿರಿಮಂಜೇಶ್ವರ : ಜನವರಿ 26 ರಂದು ಶುಭದಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇಯ ಗಣರಾಜ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲೆಯ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಅವರು ನೆರವೇರಿಸಿದರು.

ಸಹಶಿಕ್ಷಕಿಯಾದ ಶ್ರೀಮತಿ ಅನಿತಾ ನವೀನ್ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಂವಿಧಾನ ಸಮಿತಿ, ಸಂವಿಧಾನದ ರಚನೆ ಹಾಗೂ ಸಂವಿಧಾನದ ಮಹತ್ವವನ್ನು ತಿಳಿಸಿದರು.

ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯರವರು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಸಂವಿಧಾನದ ಧ್ಯೇಯ ಮತ್ತು ಅಶೋತ್ತರಗಳನ್ನು ತಿಳಿಸುತ್ತ, ಪ್ರತಿಯೊಬ್ಬ ನಾಗರಿಕನಿಗಿರುವ ಹಕ್ಕುಗಳು ಹಾಗೂ ಅದನ್ನು ಉಪಯೋಗಿಸುವ ರೀತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬೋಧಕ/ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿಯಾದ ಶ್ರೀಮತಿ ಐರಿನ್ ಸ್ವಾಗತಿಸಿ , ಶ್ರೀಮತಿ ದಿವ್ಯಾ ಪ್ರಭು ವಂದಿಸಿ, ಶ್ರೇಯಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

 

Related Articles

error: Content is protected !!