ಕೋಟ : ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಭತ್ತದ ದರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಹಿನ್ನಲ್ಲೆ ಹಾಗೂ ಖಾಸಗಿ ರೈಸ್‍ಮಿಲ್‍ನ ಮಾಲಕರು ಭತ್ತದ ಪ್ರತಿ ಕ್ವಿಂಟಾಲಿಗೆ ರೂ 2,200 ಎಂದು ನಿಗದಿಗೊಳಿಸಿದ್ದು ಅಲ್ಲದೆ ಈ ಬಾರಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು,ಭತ್ತ ಬೆಳೆಯುವ ರೈತರು ಸಂಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ತಾವು ತುರ್ತು ಕ್ರಮವಹಿಸಿ,ರೈಸ್‍ಮಿಲ್‍ನ ಮಾಲಕರು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಮತ್ತು ರೈತರನ್ನು ಸೇರಿಸಿ ಸಭೆಯೊಂದನ್ನು ನಡೆಸಿ ಕಳೆದ ವರ್ಷದಂತೆ ಈ ವರ್ಷವೂ ಭತ್ತಕ್ಕೆ ಕ್ವಿಂಟಾಲ್‍ಗೆ ರೂ 2,900 ವನ್ನು ನಿಗದಿಗೊಳಿಸಲು ಅಗತ್ಯ ಕ್ರಮವಹಿಸಲು ಉಡುಪಿ ಜಿಲ್ಲಾಧಿಕಾರಿಯವರಿU ಕೋಟದ ರೈತಧ್ವನಿ ಸಂಘ ಮನವಿ ಮಾಡಿತು.
ಈ ಸಂದರ್ಭ ಕೋಟ ರೈತ ಧ್ವನಿ ಅಧ್ಯಕ್ಷÀ ಜಯರಾಮ ಶೆಟ್ಟಿ ಪಡುಕರೆ ,ಸಂಘಟನೆಯ ಪ್ರಮುಖರಾದ ಟಿ.ಮಂಜುನಾಥ ಗಿಳಿಯಾರು ,ಮಹೇಶ್ ಶೆಟ್ಟಿ ಮಣೂರು ,ಕೀರ್ತಿಶ್ ಪೂಜಾರಿ ಕೋಟ ,ತಿಮ್ಮ ಕಾಂಚನ್ ಹರ್ತಟ್ಟು ,ಬಾಬು ಶೆಟ್ಟಿ ,ಮಹಾಬಲ ಪೂಜಾರಿ ,ಸತೀಶ್ ಶೆಟ್ಟಿ ಗುಳ್ಳಾಡಿ, ಸುಧಾಕರ ಶೆಟ್ಟಿ ಕಾಸನಗುಂದು ಮತ್ತಿತರರು ಇದ್ದರು.